ನವದೆಹಲಿ: ನಾಗ್ಪುರದ ಸಾರ್ವಜನಿಕ ಆರೋಗ್ಯ ಇಲಾಖೆಯ ಆಸ್ಪತ್ರೆ ಆಧಾರ್ನ್ನು ಉತ್ತೇಜಿಸಲು ಕೇಂದ್ರ ಸರ್ಕಾರದ ಪ್ರಾಯೋಗಿಕ ಯೋಜನೆಯ ಭಾಗವಾಗಿ ಶಿಶುಗಳಿಗೆ ಅನನ್ಯ ಗುರುತಿನ ಸಂಖ್ಯೆಯನ್ನು ಕಲ್ಪಿಸುವ ಯೋಜನೆಯನ್ನು ಬಿಡುಗಡೆ ಮಾಡಲಿದೆ.
ಆಧಾರ್ ಸಂಯೋಜಿತ ನೋಂದಣಿ ಯೊಜನೆ ಮಗುವಿನ ಜನನ ಪ್ರಮಾಣ ಪತ್ರದೊಂದಿಗೆ ಸಂಯೋಜಿಸಲಾಗುವುದು. ಇದು 18 ವರ್ಷದೊಳಗಿನ ಮಕ್ಕಳು ತಮ್ಮನ್ನು ತಾವು ನೋಂದಣಿ ಮಾಡಿಸಿಕೊಳ್ಳಲು ಸಹಾಯಕವಾಗಲಿದೆ. ಕೇಂದ್ರ ಸರ್ಕಾರ ಮಾರ್ಚ್ 2017ರ ಒಳಗಾಗಿ ಆಧಾರ್ ಯೋಜನೆಯನ್ನು ಸಾರ್ವತ್ರಿಕಗೊಳಿಸಲು ಯೋಜಿಸಿದ್ದು, ಆಗಸ್ಟ್ ತಿಂಗಳಿನಲ್ಲಿ ನಡೆದ ವಿಮರ್ಶೆ ಪ್ರಕಾರ ಮಹಾರಾಷ್ಟ್ರದಲ್ಲಿ 18 ವರ್ಷದೋಳಗಿನ ಸುಮಾರು 1.19 ಕೋಟಿ ಮಕ್ಕಳು ಇನ್ನಷ್ಟೇ ನೋಂದಣಿಗೊಳ್ಳಬೇಕಿದೆ ಎಂದು ತಿಳಿಸಿದೆ.
ನಾಗ್ಪುರದ ಸಾರ್ವಜನಿಕ ಆರೋಗ್ಯ ವಿಭಾಗದ ದಾಗಾ ಮೆಮೋರಿಯಲ್ ಆಸ್ಪತ್ರೆ ಶೀಘ್ರದಲ್ಲೇ ಆಧಾರ್ ಸಂಯೋಜಿತ ನೋಂದಣಿ ಆರಭಿಸಲಿದೆ. ಇದನ್ನು ಜನನ ಮತ್ತು ಮರಣ ನೋಂದಣಿಯ ನಾಗರಿಕ ನೋಂದಣಿ ವ್ಯವಸ್ಥೆ (ಸಿಆರ್ಎಸ್) ಜೊತೆ ಸಂಯೋಜಿಸಲಾಗುವುದು. ಟ್ಯಾಬ್ ಆಧಾರಿತ ನೋಂದಣಿ ಕಿಟ್ ಬಳಸಿ ಮಕ್ಕಳ ಫೋಟೋ ತೆಗೆದು ವಿವರಗಳನ್ನು ನೋಂದಾಯಿಸಲಾಗುವುದು ಎಂದು ಆರೋಗ್ಯ ಸೇವೆಗಳ ಹೆಚ್ಚುವರಿ ನಿರ್ದೇಶಕಿ ಡಾ. ಅರ್ಚನಾ ಹೇಳಿದ್ದಾರೆ.
ಪೋಷಕರ ಆಧಾರ್ ಸಂಖ್ಯೆಗಳನ್ನು ಪಡೆದು ಮಗುವಿನ ಆಧಾರ್ ನೋಂದಾಯಿಸಲಾಗುವುದು. ಮಗುವಿನ ಜನನ ಪ್ರಮಾಣಪತ್ರ ವಿವಗರಗಳನ್ನು 5 ಮತ್ತು 15ನೇ ವರ್ಷದಲ್ಲಿ ಪಡೆದು ಅದರೊಂದಿಗೆ ನೋದಾಯಿಸಲಾಗುವುದು. ಮಗುವಿನ ಹರೆಸರುಗಳನ್ನು ವರ್ಷದೊಳಗೆ ಪರಿಷ್ಕರಿಸಬಹುದು ಎಂದು ಸಾರ್ವಜನಿಕ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.