ರಿಯೋ ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ರೂ.90 ಲಕ್ಷ ಬಹುಮಾನ ಘೋಷಿಸಿದ ಕೇಂದ್ರ

Published on : September 29, 2016,
By :
Share on FacebookTweet about this on TwitterShare on Google+

paralympic-medallists2
ನವದೆಹಲಿ: ರಿಯೋ ಪ್ಯಾರಾಲಿಂಪಿಕ್ಸ್‌ನ ಪದಕ ವಿಜೇತರಿಗೆ ಒಟ್ಟು ರೂ. 90 ಲಕ್ಷ ಬಹುಮಾನ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ರಿಯೋ ಪ್ಯಾರಾಲಿಂಪಿಕ್ಸ್‌ನ ಹೈ-ಜಂಪ್ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಮರಿಯಪ್ಪನ್ ತಂಗವೇಲು, ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ದೇವೇಂದ್ರ ಜಝಾರಿಯಾ ಅವರು ತಲಾ ರೂ. 30 ಲಕ್ಷ ಬಹುಮಾನ ಪಡೆಯಲಿದ್ದಾರೆ. ಜೊತೆಗೆ ಶಾಟ್‌ಪುಟ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡ ದೀಪಾ ಮಲಿಕ್ ಅವರು ರೂ. 20 ಲಕ್ಷ ಮತ್ತು ಹೈ-ಜಂಪ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ ವರುಣ್ ಸಿಂಗ್ ಭಾಟಿ ರೂ. 10 ಲಕ್ಷ ಬಹುಮಾನ ಪಡೆಯಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜಾಗೃತಿ ಉದ್ಭವ ಮತ್ತು ಪ್ರಚಾರ (ಎಜಿಪಿ) ಯೋಜನೆ ಅಡಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್ ಚಂದ್ ಗೆಹ್ಲೋಟ್ ಬಹುಮಾನವನ್ನು ವಿತರಿಸಲಿದ್ದಾರೆ.

ಭಾರತದ ಪ್ಯಾರಾ ಅಥ್ಲೀಟ್‌ಗಳು ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿ ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಅವರ ಯಶಸ್ಸು ಭಾರತಕ್ಕೆ ಹೆಮ್ಮೆ ತಂದಿದೆ. ಆದ್ದರಿಂದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಅವರಿಗೆ ಒಟ್ಟು ರೂ. 90 ಲಕ್ಷ ಬಹುಮಾನ ನೀಡಲು ನಿರ್ಧರಿಸಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ.

 

Leave a Reply