ವಾಷಿಂಗ್ಟನ್: ಪಾಕಿಸ್ಥಾನ ‘ಭಯೋತ್ಪಾದಕ ರಾಷ್ಟ್ರ’ ಎಂದು ಘೋಷಿಸುವಂತೆ ಅಮೇರಿಕಾದ ಶ್ವೇತಭವನದ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಉತ್ತಮ ಬೆಂಬಲ ದೊರೆತಿದೆ.
ಸೆಪ್ಟೆಂಬರ್ 21ರಂದು ಅರ್ಜಿ ಸಲ್ಲಿಸಲಾಗಿದ್ದು, ಶ್ವೇತಭವನದ ಪ್ರತಿಕ್ರಿಯೆ ಪಡೆಯಲು 1,00,000 ಸಹಿಗಳ ಅತ್ಯವಿದೆ. ಅದರಂತೆ ಕಳೆದದ 5 ದಿನಗಳಲ್ಲಿ 82,000 ಸಹಿಗಳು ದೊರೆತಿವೆ.
ಪಾಕಿಸ್ಥಾನ ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವಂತೆ ಸಲ್ಲಿಸಿರುವ ಅರ್ಜಿ ಅಮೇರಿಕಾದ ಜನತೆ, ಭಾರತ ಮತ್ತು ಪಾಕಿಸ್ಥಾನದ ಭಯೋತ್ಪಾದನೆಗೆ ಗುರಿಯಾಗಿರುವ ಇತರ ರಾಷ್ಟ್ರಗಳಿಗೆ ಬಹು ಅಗತ್ಯವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಪಾಕಿಸ್ಥಾನ ಭಯೋತ್ಪಾದಕ ರಾಷ್ಟ್ರ ಭಯೋತ್ಪಾದನೆ ಹುದ್ದೆ ಕಾಯಿದೆ (ಎಚ್ಆರ್ 6069) ಬಿಲ್ನ್ನು ಟೆಡ್ ಪೋ ಹಾಗೂ ಡೆಮಾಕ್ರೆಟಿಕ್ ಪಕ್ಷದ ಡಾನಾ ರೋಹ್ರಬಚೆರ್ ಯುಎಸ್ ಸಂಸತ್ನಲ್ಲಿ ಮಂಡಿಸಿದ್ದರು.
ಈ ಅರ್ಜಿ 1,00,000 ಸಹಿ ಪಡೆಯಲು ಅಕ್ಟೋಬರ್ 21ರ ವರೆಗೆ ಗಡುವು ನೀಡಲಾಗಿದೆ.
ಶ್ವೇತಭವನದಲ್ಲಿ ಹಲವು ಸಂದರ್ಭಗಳಲ್ಲಿ ಸ್ಥಳೀಯ, ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಲಾUಗಿದೆ.
ಶ್ವೇತಭವನದ ವೆಬ್ಸೈಟ್ನಲ್ಲಿ ಸಲ್ಲಿಸಲಾದ ಯಾವುದೇ ಅರ್ಜಿಗೆ ೩೦ ದಿನಗಳಲ್ಲಿ ಕನಿಷ್ಠ 1 ಲಕ್ಷ ಸಹಿಗಳು ದೊರೆತಲ್ಲಿ 60 ದಿನಗಳ ಒಳಗೆ ಪ್ರತಿಕ್ರಿಯೆ ನೀಡುವ ಭರವಸೆ ಶ್ವೇತಭವನ ನೀಡಿದೆ.
ಪಾಕಿಸ್ಥಾನದ ನೆಲೆಯಲ್ಲಿ ಹುಟ್ಟಿರುವ ಭಯೋತ್ಪಾನೆಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಎಲ್ಲ ವಿಭಾಗಗಳಲ್ಲೂ ಪಾಕಿಸ್ಥಾನದ ಮೇಲೆ ಅಮೇರಿಕಾ ಪದೇ ಪದೇ ಒತ್ತಡ ಹೇರುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ನ ಸೇನಾ ನೆಲೆ ಮೇಲೆ ನಡೆದ ದಾಳಿಯಿಂದಾಗಿ ಪಾಕಿಸ್ಥಾನ ಅಂತಾರಾಷ್ಟ್ರೀಯ ಸಮುದಾಯದಿಂದ ಪ್ರತ್ಯೇಕಗೊಳ್ಳುವ ಭೀತಿಯನ್ನು ಎದುರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.