ಮುಂಬಯಿ: ಹುಲಿಗಳ ನೆಲೆಗಳ ಬಗ್ಗೆ ಮಾಹಿತಿ ನೀಡುವ ಪ್ರವಾಸಿಗರ ಮೇಲೆ ಕಣ್ಗಾವಲು ನಡೆಸಲು ಸಾಮಾಜಿಕ ಮಾಧ್ಯಮಗಳ ಮೇಲ್ವಿಚಾರಣೆಗೆ ಮಹಾರಾಷ್ಟ್ರ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸೂಚಿಸಿದೆ.
ಪ್ರವಾಸಿಗರು ಸಾಮಾಜಿಕ ಮಾಧ್ಯಮಗಳಲ್ಲಿ ದಾಖಲೆಗಳ ದುರ್ಬಳಕೆ ಮಾಡಿ ಬೇಟೆಗಾರರು ಪ್ರಾಣಿಗಳ ಬೇಟೆ ನಡೆಸುವ ಸಾಧ್ಯತೆಗಳಿವೆ. ಆದ್ದರಿಂದ ಅವುಗಳ ರಕ್ಷಣೆಗಾಗಿ ಫೇಸ್ಬುಕ್ ಮತ್ತಿತರ ಸಾಮಾಜಿಕ ಮಾಧ್ಯಮಗಳ ಮೇಲ್ವಿಚಾರಣೆ ಮೂಲಕ ಅರಣ್ಯ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.
ಸಾಮಾಜಿಕ ಮಾಧ್ಯಮ ಮತ್ತಿತರ ವೇದಿಕೆಗಳ ಬಳಕೆ ಹೆಚ್ಚಳದಿಂದ ಹುಲಿಗಳ ನೆಲೆಯ ಬಗ್ಗೆ ಮಾಹಿತಿಗಳು ಹಬ್ಬುತ್ತಿವೆ. ಆದ್ದರಿಂದ ಅರಣ್ಯ ಇಲಾಖೆ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಸಂರಕ್ಷಿತ ಪ್ರದೇಶಗಳ ನಿರ್ವಹಿಸುವುದು ಕಡ್ಡಾಯವಾಗಿದೆ. ಪ್ರವಾಸಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಇವುಗಳನ್ನು ಪೋಸ್ಟ್ ಮಾಡುವಾಗ ಎಚ್ಚರ ವಹಿಸಬೇಕು ಎಂದು ಪೆಂಚ್ ಹುಲಿ ಸಂರಕ್ಷಣೆ ಅಭಯಾರಣ್ಯದ ತಜ್ಞ ಜಯದೀಪ್ ದಾಸ್ ಹೇಳಿದ್ದಾರೆ.
ಹುಲಿಗಳ ರಕ್ಷಣೆ ಮತ್ತು ಪರಿಸರ ಸ್ಥಿತಿ (M-STrIPES)- ಮೇಲ್ವಿಚಾರಣೆ ವ್ಯವಸ್ಥೆಯ ಸಾಫ್ಟ್ವೇರ್ ಮತ್ತು ತಂತ್ರಜ್ಞಾನವು ಪರಿಶೀಲನೆ, ಗಸ್ತು ನಿರ್ವಹಣೆ ಮತ್ತು ದಾಖಲೆ ಮಾಹಿತಿಗಳನ್ನು ನಿರ್ವಹಿಸುತ್ತದೆ ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಪೆಂಚ್, ಬೋರ್, ತಾಡೋಬಾ-ಅಂಧಾರಿ, ನವೇಗಾಂವ್-ನಗ್ಜೀರ, ಸಹ್ಯಾದ್ರಿ ಮತ್ತು ಮೇಲ್ಘಾಟ್ ಎಂಬ ಆರು ಹುಲಿ ಅಭಯಾರಣ್ಯಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.