ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ್ನು ಮೂಲ ಹಿಂದಿ ಭಾಷಣದ ಜೊತೆ ಅತೀ ಶೀಘ್ರದಲ್ಲೇ ದೇಶದಾದ್ಯಂತ ಏಕಕಾಲದಲ್ಲಿ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ವಿವಿಧ ರಾಜ್ಯಗಳಲ್ಲಿಯ ಭಾಷಾ ಸಮಸ್ಯೆಯನ್ನು ತೊಡೆದು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಪ್ರಧಾನಿ ಮೋದಿಯವರ ಸಂಧೇಶ ತಲುಪುವಂತೆ ಮಾಡುವುದು ಇದರ ಪ್ರಮುಖ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಕಚೇರಿ ಈಗಾಗಲೇ ಮಾಹಿತಿ ಮತ್ತು ಪ್ರಸಾರ (ಐ&ಬಿ) ಸಚಿವಾಲಯಕ್ಕೆ ಈ ಯೋಜನೆಗೆ ಚಾಲನೆ ನೀಡಲು ಅನುಮತಿ ನೀಡಿದ್ದು, ಸಚಿವಾಲಯ ಈ ಯೋಜನೆಯನ್ನು ಕಾರ್ಯಗತಗೊಳಿಸುವಂತೆ ಆಲ್ ಇಂಡಿಯಾ ರೇಡಿಯೋಗೆ ಸೂಚಿಸಿದೆ.
ದಕ್ಷಿಣ ಭಾರತದ ವಿವಿಧ ರಾಜ್ಯಗಳ ಜನರು ಹಿಂದಿ ಬಾಷೆಯಲ್ಲಿರುವ ಪ್ರಧಾನಿಯವರ ಮನ್ ಕಿ ಬಾತ್ ಭಾಷಣ ತಿಳಿದುಕೊಳ್ಳಲು ಸಮಸ್ಯೆ ಎದುರಿಸುತ್ತಿದ್ದು, ಮೂಲ ಹಿಂದಿಯಲ್ಲಿರುವ ಸಂದೇಶವನ್ನು ರಾಜ್ಯಗಳ ಬಾಷೆಗಳಿಗೆ ರೂಪಾಂತರ ಅನುವಾದ ಮಾಡಲಾಗುವುದು.
ಆಲ್ ಇಂಡಿಯಾ ರೇಡಿಯೋ ಮನ್ ಕಿ ಬಾತ್ ಸಾಪ್ತಾಹಿಹ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದ್ದು, ಅನುವಾದ ಕಾರ್ಯವನ್ನು ಗುತ್ತಿಗೆ ಅಥವಾ ಕಾಂಟ್ರಾಕ್ಟ್ ನಿವೇದಕರಿಗೆ ಒಪ್ಪಿಸಲಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.