ನ್ಯೂಯರ್ಕ್: ನಾಸಾ ತನ್ನ ನ್ಯೂ ಆರ್ಲಿಯಾನ್ಸ್ನ ಮಿಚೌಡ್ ಅಸೆಂಬ್ಲಿ ಫೆಸಿಲಿಟಿಯಲ್ಲಿ ವಿಶ್ವದ ಅತೀ ದೊಡ್ಡ ಉಪಗ್ರಹ ಉಡಾವಣಾ ರಾಕೆಟ್ ನಿರ್ಮಿಸುತ್ತಿದೆ.
ನಾಸಾ 212 ಅಡಿ ಎತ್ತರದ ಉಪಗ್ರಹ ಉಡಾವಣೆ ರಾಕೆಟ್ನ್ನು ಹಂತ ಹಂತವಾಗಿ ನಿರ್ಮಿಸಲಿದೆ. ಈ ರಾಕೆಟ್ 2018ರಿಂದ ಆರಂಭಗೊಳ್ಳಲಿರುವ ಚಂದ್ರ ಗ್ರಹದ ಅನ್ವೇಷಣೆ ಮತ್ತು 2030ರಲ್ಲಿ ಮಂಗಳನಲ್ಲಿ ಅನ್ವೇಷಣೆ ನಡೆಸಲು ಘನ ವಸ್ತುಗಳಾದ ಲ್ಯಾಂಡರ್ಗಳು, ವಸಸ್ಥಾನಗಳು ಮತ್ತು ಅಗತ್ಯ ಉಪಕರಣಗಳ ಪೂರೈಕೆಗೆ ಸಹಾಯಕವಾಗಲಿದೆ.
ಮಂಗಳನಲ್ಲಿ ಉಡಾವಣೆಗೆ ಈ ರಾಕೆಟ್ 2.3 ಪೌಂಡ್ ತೂಕದ ಜಲಜನಕ ಮತ್ತು ಆಮ್ಲಜನಕ ಹೊಂದಿದ ನಾಲ್ಕು ಆರ್ಎಸ್ 25 ಇಂಧನ ಟ್ಯಾಂಕ್ಗಳನ್ನು ಹೊತ್ತೊಯ್ಯಲಿದೆ. ಇಂಜಿನಿಯರ್ಗಳು ಮೊದಲ ಹಂತದಲ್ಲಿ ಇದರ 130 ಅಡಿ ಎತ್ತರದ ಇಂಧನ ಟ್ಯಾಂಕ್ಗಳನ್ನು ನಿರ್ಮಿಸಿದ್ದಾರೆ.
ಮಿಸಿಸ್ಸಿಪ್ಪಿಯ ಬೇ ಸೈಂಟ್ ಲೂಯಿಸ್ನಲ್ಲಿರುವ ನಾಸಾದ ಸ್ಟೆನ್ನಿಸ್ ಉಪಗ್ರಹ ಕೇಂದ್ರದಲ್ಲಿ ಇದರ ಪರೀಕ್ಷೆ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.