ಕಟೀಲು : ಬಿಲ್ಲವ ಸಮಾಜ ಸೇವಾ ಸಂಘ ಅಜಾರು-ಕಟೀಲು ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ 162 ನೇ ಜನ್ಮದಿನವನ್ನು ಬಹಳ ಸಂಭ್ರಮದಿಂದ ಶ್ರೀ ಧೂಮಾವತೀ ದೈವಸ್ಥಾನದ ವಠಾರದಲ್ಲಿ ಆಚರಿಸಲಾಯಿತು.
ಗೌರವಾಧ್ಯಕ್ಷ ಶ್ರೀ ಈಶ್ವರ್ ಕಟೀಲು ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹರಿಪಾದ ಜಾರಂತಾಯ ಯುವಕ ಮಂಡಲ ಕೊಕುಡೆ ಇವರಿಂದ ಭಜನಾ ಕಾರ್ಯಕ್ರಮ ಜರುಗಿತು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿರಿಪಾಡ್ದನ ಕಲಾವಿದೆ, ಶ್ರೀಮತಿ ರಾಮಕ್ಕ ಗಿಡಿಗೆರೆ ಇವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರು ಹಾಗೂ ಮೂಲ್ಕಿ ಮೂಡಬಿದ್ರಿ ಕ್ಷೇತ್ರದ ಶಾಸಕರಾದ ಶ್ರೀ ಅಭಯಚಂದ್ರ ಜೈನ್ ಮಾತನಾಡಿ ನಾರಾಯಣ ಗುರುಗಳ ಆದರ್ಶ ಮತ್ತು ತತ್ವವನ್ನು ಎಲ್ಲರೂ ಇಂದಿನ ದೈನಂದಿನ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಅತ್ತೂರು-ಕಾಪಿಕಾಡು ಕೋಡ್ದಬ್ಬು ದೈವಸ್ಥಾನದ ಮೊಕ್ತೇಸರಾದ ಶ್ರೀ ಶೀನ ಸ್ವಾಮಿ ಮಾತನಾಡಿ ನಾರಾಯಣ ಗುರುಸ್ವಾಮಿಗಳ ಬಿಂಬ ಪ್ರತಿಷ್ಠೆ ಹಾಗೂ ಬಿಲ್ಲವ ಸಮುದಾಯ ಭವನದ ಬಗ್ಗೆ ಸಮಾಜ ಬಂಧುಗಳು ಯೋಚನೆ ಯೋಜನೆಯನ್ನು ಹಾಕಿ ಮುಂಬರುವಂತಹ ದಿನಗಳಲ್ಲಿ ಅದನ್ನು ಕಾರ್ಯ ರೂಪದಲ್ಲಿ ನಡೆಸಬೇಕು ಎಂದು ಅಭಿಪ್ರಾಯವಿತ್ತರು. ಸಂಘದ ಗೌರವ ಸಲಹೆಗಾರರಾದ ಶ್ರೀ ಮಹೇಶ್ ಶಾಂತಿ ಹೆಜಮಾಡಿ ನಾರಾಯಣ ಗುರುಗಳ ಸಂದೇಶವನ್ನು ಸಮಾಜ ಬಾಂಧವರಿಗೆ ವಿವರಿಸಿದರು. ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಪೂಜಾರಿ, ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ. ಸರೋಜಿನಿ, ಹಾಗೂ ಶ್ರೀ ಕೇಶವ್ ಪೂಜಾರಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.