ನವದೆಹಲಿ: ಕೇಂದ್ರ ಸರ್ಕಾರದ ಸರಕು ಮತ್ತ ಸೇವಾ ತೆರಿಗೆ (ಜಿಎಸ್ಟಿ) ದರವನ್ನು ಶೇ.15ಕ್ಕೆ ಸೀಮಿತಗೊಳಿಸಿ, ಶುಲ್ಕಗಳ ಏರಿಕೆಯನನು ತಪ್ಪಿಸಲು ಪ್ರಸ್ತುತ ಅಸ್ತಿತ್ವದಲ್ಲಿರುವ ತೆರಿಗೆ ವಿನಾಯಿತಿಯನ್ನು ಉಳಿಸಿಕೊಳ್ಳುವಂತೆ ವಿಮಾನಯಾನ ಇಲಾಖೆ ಸರ್ಕಾರಕ್ಕೆ ಮನವಿ ಮಾಡಿದೆ.
ಆರ್ಥಿಕವಾಗಿ ದೇಶವನ್ನು ಒಗ್ಗೂಡಿಸುವ ಗುರಿ ಹೊಂದಿರುವ ಜಿಎಸ್ಟಿ ಮಸೂದೆ ಮುಂದಿನ ವರ್ಷ ಜಾರಿಗೆ ಬರಲಿದ್ದು, ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಳವಡಿಸಿದ ಅಬಕಾರಿ ಸುಂಕ, ಸೇವಾ ತೆರಿಗೆ, ಮೌಲ್ಯವರ್ಧಿತ ತೆರಿಗೆ, ಮನೊರಂಜನೆ ಮತ್ತು ಐಶಾರಾಮಿ ತೆರಿಗೆ ಮುಂದಾದ ತೆರಿಗೆಗಳನ್ನು ಒಂದುಗೂಡಿಸಲಿದೆ.
ಪ್ರಸ್ತುತ ವಿಮಾನಯಾನ ಸೇವಾ ತೆರಿಗೆ ಶೇ.14 ಇದ್ದು, ಸ್ವಚ್ಛ ಭಾರತ ಸೆಸ್ ಮತ್ತು ಕೃಷಿ ಕಲ್ಯಾಣ ಸೆಸ್ ಸೇರಿ ಶೇ.೧೫ರಷ್ಟು ತೆರಿಗೆ ಪಾವತಿಸುತ್ತಿದೆ.
ಯಾವುದೇ ಪರಿಸ್ಥಿತಿಯಲ್ಲಿ ಜಿಎಸ್ಟಿ ದರ ಶೇ.೧೫ ಮೀರಬಾರದು. ಇದು ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಬೆಳವಣಿಗೆಗೆ ತಡೆ ಬೀಳಲಿದೆ ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಎಸ್ಟಿ ದರ ಹೆಚ್ಚಿದಲ್ಲಿ ವಿಮಾನಯಾನ ದರಗಳು ಶೇ. 9-15ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.