ಸಿರುವತೂರ್: ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಕೆ. ಬಾಲಮುರುಗನ್ ಜನರಿಗೆ ಉಚಿತ ನೀರು, ಶಾಲೆಯ ನವೀಕರಣ, ಕಿರುರಸ್ತೆ ನಿರ್ಮಾಣ ಮತ್ತಿತರ ಮೂಲಭೂತ ಸೌಕರ್ಯ ಒದಗಿಸಲು ತಮಿಳುನಾಡಿನ ತನ್ನ ಊರು ಸಿರುವತ್ತೂರ್ನ್ನು ದತ್ತು ಪಡೆದಿದ್ದಾರೆ.
ಪಶ್ಚಿಮ ಬಂಗಾಳ ಕ್ಯಾಡರ್ನ ಐಎಫ್ಎಸ್ ಅಧಿಕಾರಿಯಾಗಿರುವ ಬಾಲಮುರುಗನ್, ಚೆನ್ನೈಯಲ್ಲಿ ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿಯಾಗಿ ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಿದ್ದಾರೆ.
ಸುಮಾರು ೩೦ ವರ್ಷಗಳ ಬಳಿಕ ತನ್ನ ಗ್ರಾಮಕ್ಕೆ ಭೇಟಿ ನೀಡುತ್ತಿರುವ ಬಾಲಮುರುಗನ್ ಅಲ್ಲಿಯ ಭಾರತೀಯ ರೈತ ಕಾರ್ಪೋರೇಟಿವ್ಗೆ ಭೇಟಿ ನೀಡಿದ್ದು, ಗ್ರಾಮಸ್ಥರ ಗುಡಿಸಲುಗಳ ರಕ್ಷಣೆಗೆ ೧,೫೦೦ ಟರ್ಪಲ್ಗಳು ಮತ್ತು ೧,೫೦೦ ಅಕ್ಕಿ ಚೀಲಗಳನ್ನು ಒದಗಿಸಿದೆ.
ಗ್ರಾಮದ ೨,೫೦೦ ಕುಟುಂಬಗಳು ಶುದ್ಧ ಕುಡಿಯುವ ನೀರು, ಉಚಿತ ಅಕ್ಕಿ ಚೀಲ, ರಸ್ತೆ ದೀಪ ಅಳವಡಿಸಲು ಸಹಕರಿಸುತ್ತಿದ್ದಾರೆ.
ಸ್ಥಳೀಯ ಅಧಿಕಾರಿಗಳ ಸಹಾಯದಿಂದ ಸಿರುವತೂರ್-ಪಣಿಕಂಕುಪ್ಪಮ್ ನಡುವೆ ಸೇತುವೆ ಮಾರ್ಗ ನಿರ್ಮಾಣಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಲ್ಲದೇ ಬಾಲಮುರುಗನ್ ಅವರು ಪಂರೂತಿ ಪಟ್ಟಣದ ಸರ್ಕಾರಿ ಶಾಲೆಯನ್ನು ಪುನಸ್ಥಾಪಿಸಲು ನೈವೇಲಿ ಲಿಗ್ನೈಟ್ ಕಾರ್ಪೋರೇಶನ್ ಜೊತೆ ಕಾರ್ಯ ನಿರ್ವಹಿಸುತ್ತಿದ್ದು, ಇದಕ್ಕೆ ಸುಮಾರಿ 60 ಲಕ್ಷ ವೆಚ್ಚ ತಗಲಬಹುದು ಎಂದು ಅಂದಾಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.