ನವದೆಹಲಿ: ದೇಶದಾದ್ಯಂತ ಸ್ಮಾರ್ಟ್ಫೋನ್ಗಳು ಕೈಗೆಟಕುವ ದರಗಳಲ್ಲಿ ಲಭ್ಯವಾಗುತ್ತಿರುವುದು ಮತ್ತು ಇಂಟರ್ನೆಟ್ ಸೌಕರ್ಯ ಬೆಳೆಯುತ್ತಿದ್ದು 2020ರ ವೇಳೆಗೆ ಇಂಟರ್ನೆಟ್ ಬಳಕೆದಾರರ ಸಂಖ್ಯೆ 500 ಮಿಲಿಯನ್ ತಲುಪಲಿದೆ ಎಂದು ಗೂಗಲ್ ಏಷ್ಯಾ ಪ್ಯಾಸಿಫಿಕ್ ಭಾಷಾ ಮುಖ್ಯಸ್ಥೆ ರಿಚಾ ಸೀಂಗ್ ಚಿತ್ರಾಂಶಿ ತಿಳಿಸಿದ್ದಾರೆ.
ಭಾರತದ ಆನ್ಲೈನ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದು, ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ಸ್ಮಾರ್ಟ್ಫೋನ್ ಮತ್ತು ದಾಟಾ ಆಫರ್ಗಳು ಜನರು ಆನ್ಲೈನ್ಗೆ ಬರುವಂತೆ ಮಾಡಿದೆ ಎಂದು ಹೇಳಿದ್ದಾರೆ. ಅವರು ರಾಜೀವ್ ಗಾಂಧಿ ಪ್ರಾಯೋಗಿಕಿ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಭಾರತದ ಶೇ.65 ಮಂದಿ ತಮ್ಮ ಮೊಬೈಲ್ ಮೂಲಕವೇ ಇಂಟರ್ನೆಟ್ ಬಳಸುತ್ತಿದ್ದು, ಸ್ಮಾರ್ಟ್ಫೋನ್ಗಳು ಸ್ಥಳೀಯ ಭಾಷೆಗಳನ್ನು ಬಳಸುವ ಅವಕಾಶ ಒದಗಿಸಿದ್ದರಿಂದ ಆಂಗ್ಲ ಭಾಷೆ ಬದಲು ಸ್ಥಳೀಯ ಭಾಷೆ ಬಳಸುವವರ ಸಂಖ್ಯೆ ಹೆಚ್ಚಲಿದೆ ಎಂದು ಚಿತ್ರಾಂಶಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.