ನವದೆಹಲಿ: ಜಾವೆಲಿನ್ ಎಸೆತಗಾರ ದೇವೇಂದ್ರ ಜಝಾರಿಯಾ ಬುಧವಾರ ಪ್ಯಾರಾಲಿಂಪಿಕ್ಸ್ನಲ್ಲಿ ಎರಡನೇ ಬಾರಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತೀಯ ಕ್ರೀಡೆಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ರಿಯೋ ಕ್ರೀಡಾಕೂಟದಲ್ಲಿ ಅವರು ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.
ಅವರು ರಿಯೋದಲ್ಲಿ ನಡೆದ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ 63.97 ಮೀಟರ್ ದೂರ ಎಸೆಯುವ ಮೂಲಕ 2004ರ ಅಥೆನ್ಸ್ ಕ್ರೀಡಾಕೂಟದಲ್ಲಿ 62.15 ಮೀಟರ್ ದಾಖಲೆಯನ್ನು ಮುರಿದಿದ್ದಾರೆ.
ಒಂದು ವರದಿ ಪ್ರಕಾರ 16 ವರ್ಷಗಳ ಹಿಂದೆ 2000ರಲ್ಲಿ ನಡೆದ ಒಂದು ಘಟನೆ ದೇವೇಂದ್ರ ಜಝಾರಿಯಾ ಮೇಲೆ ತೀವ್ರ ಪ್ರಭಾವ ಬೀರಿತ್ತು ಎಂದು ತಿಳಿಸಿದೆ.
ಗ್ವಾಲಿಯರ್ನ ಲಕ್ಷ್ಮೀಬಾಯಿ ನ್ಯಾಷನಲ್ ಯೂನಿವರ್ಸಿಟಿ ವಿಶ್ವವಿದ್ಯಾಲಯದಲ್ಲಿ ನಡೆದ ಅಂತರ್ -ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ಕ್ರೀಡಾಕೂಟದಲ್ಲಿ ದೇವೇಂದ್ರ ಜಝಾರಿಯಾ ತಮ್ಮ ಕೋಚ್ ರಿಪು ದಾಮನ್ ಸಿಂಗ್ ಜೊತೆ ಆಗಮಿಸಿದ್ದರು.
ದೃಢಕಾಯ ಕ್ರೀಡಾಪಟುಗಳಿಗೆ ನಡೆದ ಜಾವೆಲಿನ್ ಎಸೆತ ಕ್ರೀಡೆಯಲ್ಲಿ ದೇವೇಂದ್ರ ಸ್ಪರ್ಧಿಸುತ್ತಿರುವುದು ಇತರ ಪ್ರತಿಸ್ಪರ್ಧಿ ಕೋಚ್ಗಳಿಗೆ ಆಶ್ಚರ್ಯಚಕಿತಗೊಳಿಸಿತು.
ಇಡೀ ರಾಜಸ್ಥಾನದಲ್ಲಿ ನಿಮಗೆ ದೃಢಕಾಯ ಕ್ರೀಡಾಪಟು ಸಿಗಲಿಲ್ವೇ. ನೀವೇಕೆ ಈ ದಿವ್ಯಾಂಗ ಬಾಲಕನನ್ನು ಆಯ್ಕೆ ಮಾಡಿದಿರಿ? ಎಂದು ಪ್ರಶ್ನಿಸಿದ್ದರು.
ಕೋಚ್ ರಿಪು ದಾಮನ್ ಇದರಿಂದ ಆಘಾತಕ್ಕೊಳಗಾದರು. ಅಷ್ಟೇ ಅಲ್ಲದೇ ದಾಮನ್ ಹಾಗೂ ದೇವೇಂದ್ರ ಈ ವಿಚಾರವಾಗಿ ಮತ್ತೆ ಮಾತನಾಡಿಲ್ಲ.
ಇದರ ನಾಲ್ಕು ವರ್ಷ ನಂತರ ಅಥೆನ್ಸ್ ಪ್ಯಾರಾಲಿಂಪಿಕ್ಸ್ನಲ್ಲಿ ದೇವೇಂದ್ರ ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.