ನವದೆಹಲಿ: ಭಾರತ ಮತ್ತು ಕೇನ್ಯಾ ನಡುವೆ ರಾಷ್ಟ್ರೀಯ ವಸತಿ ಅಭಿವೃದ್ಧಿ ನೀತಿ ಮತ್ತು ನಿರ್ವಹಣೆ (NHPDM) ಒಪ್ಪಂದಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕೇನ್ಯಾ ಭೇಟಿ ವೇಳೆ ಜುಲೈ ೧೧, ೨೦೧೬ರಂದು ನೈರೋಬಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಒಪ್ಪಂದದ ಅಡಿಯಲ್ಲಿ ಎರಡೂ ರಾಷ್ಟ್ರಗಳು ವಸತಿ ಯೋಜನೆ ಮತ್ತು ಮಾನವ ವಸತಿ ತಂತ್ರಗಳು, ವಿನಿಮಯ ಭೇಟಿ, ಅಧಿಕಾರಿಗಳ ತರಬೇತಿ, ಕಾರ್ಯಾಗಾರ, ಎಕ್ಸ್ಪೋಸ್ ಮತ್ತು ಪ್ರದರ್ಶನಗಳು, ಎಲ್ಲಾ ವಿಷಯಗಳಲ್ಲಿ ಸಹಯೋಗ ನಿರ್ವಹಿಸಲಿವೆ.
ಈ ಒಪ್ಪಂದ ಎರಡೂ ರಾಷ್ಟ್ರಗಳ ಸ್ಲಂ ಪ್ರದೇಶಗಳ ಅಭಿವೃದ್ಧಿ ಮತ್ತು ಉನ್ನತೀಕರಣ, ಅನುಷ್ಠಾನ ಪ್ರಕ್ರಿಯೆ ಆಧಾರದಲ್ಲಿ ತಡೆಗಟ್ಟುವಿಕೆ ಕ್ರಮಗಳತ್ತ ಗಮನ ಹರಿಸಲಿವೆ.
ವಸತಿ ಮತ್ತು ರಿಯಲ್ ಎಸ್ಟೇಟ್ ಡಾಟಾಗಳ ಅಭಿವೃದ್ಧಿ ಹಾಗೂ ಮಾಹಿತಿ ಹಂಚಿಕೆ, ಮಾರುಕಟ್ಟೆ ಶೈಲಿ, ಅತ್ಯುತ್ತಮ ಆಚರಣೆ ಮತ್ತು ಬಂಡವಾಳ ಹೂಡಿಕೆ ಅವಕಾಶಗಳ ಬಗ್ಗೆ ಸಹಕಾರ ನೀಡಲಿವೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.