ನವದೆಹಲಿ: ಕೇಂದ್ರ ಸಂಪುಟ ಸೋಮವಾರ ಜಿಎಸ್ಟಿ ಮಂಡಳಿಯ ರಚನೆ, ಪ್ರಕ್ರಿಯೆ, ಮತ್ತು ಕಾರ್ಯನಿರ್ವಹಣೆಗೆ ಸೂಚಿಸಿದೆ. ಇದು ಹೊಸ ಪರೋಕ್ಷ ತೆರಿಗೆ ನೀತಿ ಆಡಿಯಲ್ಲಿ ತೆರಿಗೆ ದರವನ್ನು ನಿರ್ಧರಿಸಲಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ಮಂಡಳಿಯು 29 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳನ್ನು ಒಳಗೊಂಡಿದ್ದು, ನವೆಂಬರ್ 11ರ ಒಳಗೆ ಸ್ಥಾಪನೆಯಾಗುವ ಸಾಧ್ಯತೆ ಇದೆ.
ಇದು ಎಪ್ರಿಲ್ 1, 2017ರಿಂದ ಜಾರಿಗೆ ಬರಲಿರುವ ಪರೋಕ್ಷ ತೆರಿಗೆಯ ತೆರಿಗೆ ದರ, ವಿನಾಯಿತಿ ಮತ್ತು ಮಿತಿಗಳನ್ನು ನಿರ್ಧರಿಸಲಿದೆ. ಸರ್ಕಾರ ಜಿಎಸ್ಟಿ ಮಂಡಳಿ ಸ್ಥಾಪನೆಗೆ ಸೆಪ್ಟೆಂಬರ್ 12ರಂದು ಸೂಚಿಸಿದ್ದು, 60 ದಿನಗಳಲ್ಲಿ ಪೂರ್ಣಗೊಳ್ಳಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಜಿಎಸ್ಟಿ ಮಂಡಳಿಯ ರಚನೆ, ಪ್ರಕ್ರಿಯೆ, ಮತ್ತು ಕಾರ್ಯನಿರ್ವಹಣೆಗೆ ಅನುಮೋದನೆ ನೀಡಿದ್ದಾರೆ.
ಕೇಂದ್ರ ಸಂಪುಟ ಜಿಎಸ್ಟಿ ಸಂವಿಧಾನ ಮತ್ತು ಮಂಡಳಿಯ ನಿರ್ಣಯಗಳ ಜಾರಿಗೆ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳನ್ನು ಸೂಚಿಸಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅಧ್ಯಕ್ಷತೆಯ ಜಿಎಸ್ಟಿ ಮಂಡಳಿಯು ರಾಜ್ಯ ಹಣಕಾಸು ಸಚಿವ ಮತ್ತು ಎಲ್ಲಾ ರಾಜ್ಯಗಳ ಹಣಕಾಸು ಮಂತ್ರಿಗಳನ್ನು ಒಳಗೊಂಡಿದೆ.
ಕೇಂದ್ರವು ಮೂರನೇ ಒಂದರಷ್ಟು ಮತಗಳನ್ನು ಹೊಂದಿದರೆ, ರಾಜ್ಯಗಳು ಮೂರನೇ ಎರಡರಷ್ಟು ಮತಗಳನ್ನು ಹೊಂದಲಿವೆ. ಜಿಎಸ್ಟಿ ನಿರ್ಣಯಗಳ ಅಳವಡಿಕೆಗೆ ನಾಲ್ಕನೇ ಮೂರರಷ್ಟು ಬಹುಮತ ಹೊಂದುವ ಅಗತ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.