ಚೆನ್ನೈ: ನಿಮಗೆ ಎಂದಾದರೂ ಮ್ಯೂಸಿಯಂಗೆ ಹೋಗಿ ಬೇಸರವೆನಿಸಿದ್ದರೆ ಚೆನ್ನೈಯ ಕ್ಲಿಕ್ ಆರ್ಟ್ ಮ್ಯೂಸಿಯಂ ನಿಮ್ಮ ಭಾವನೆಯನ್ನು ಬದಲಿಸಲಿದೆ. ನಗರದ ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ ಕ್ಲಿಕ್ ಆರ್ಟ್ ಮ್ಯೂಸಿಯಂ ಅನನ್ಯ 3D ಕಲಾಪ್ರಕಾರಗಳೊಂದಿಗೆ ಜನರನ್ನು ಆಕರ್ಷಿಸುತ್ತಿದೆ.
ದೇವದೂತರ ಚಿತ್ರಗಳು, ಗೊಂಡೋಲಾ ಚಿತ್ರಸದೃಶಗಳೊಂದಿಗೆ ಇಲ್ಲಿಯ ಅನೇಕ 3D ಕಲಾಪ್ರಕಾರಗಳ ಚಿತ್ರಗಳು ಜನರು ಮತ್ತೆ ಮತ್ತೆ ಬರುವಂತೆ ಮಾಡುತ್ತಿದೆ. ಇಲ್ಲಿನ ವರ್ಣಚಿತ್ರಗಳು ಜನರು ಒಂದೇ ಸೂರಿನಡಿ ಖುಷಿಯನ್ನು ಅನುಭವಿಸುವಂತೆ ಮಾಡುತ್ತದೆ.
ಮ್ಯೂಸಿಯಂನಲ್ಲಿ ತೆಗೆಯಲಾದ ಸುಮಾರು 12 ಲಕ್ಷ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಸುಮಾರು 2000 ವರ್ಷಗಳಷ್ಟು ಹಳೆಯ ಒಂದು ಚಿತ್ರಕಲೆಯನ್ನು ಸ್ಮಾರ್ಟ್ಫೋನ್ಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಎಪ್ರಿಲ್ನಲ್ಲಿ ಉದ್ಘಾನೆಗೊಂಡ ಬಳಿಕ ಮ್ಯೂಸಿಯಂಗೆ ಈವರೆಗೆ ಸುಮಾರು 70,000 ಜನರು ಭೇಟಿ ನೀಡಿದ್ದಾರೆ.
ಹೆಸರಾಂತ ಕಲಾವಿದ ಶ್ರೀಧರ್, ಈ ಮ್ಯೂಸಿಯಂ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಹೊಸ ರೀತಿಯಲ್ಲಿ ಜನರನ್ನು ಸೆಳೆಯುವ ಕಲ್ಪನೆ ಇದಾಗಿದೆ. ದೆಹಲಿ, ಮುಂಬಯಿ ಸೇರಿದಂತೆ ಭಾರತದ 22 ನಗರಗಳು ಮಾತ್ರವಲ್ಲದೇ ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲೂ ಈ ಆರ್ಟ್ ಗ್ಯಾಲರಿ ಪ್ರದರ್ಶನಗೊಂಡಿದೆ.
ಟ್ರಿಕ್ ಆರ್ಟ್ ರೀತಿಯ 24 ವಿವಿಧ 3D ಕಲೆಗಳು ಇಲ್ಲಿವೆ. ಇವು ಒಂದು ರೀತಿ ನೈಜ ಚಿತ್ರಗಳಂತೆ ಭಾಸವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.