ನವದೆಹಲಿ: ದೆಹಲಿ-ಮುಂಬಯಿ ನಡುವೆ ಟಾಲ್ಗೋ ಹೈ-ಸ್ಪೀಡ್ ರೈಲಿನ ಪರೀಕ್ಷಾರ್ಥ ಚಾಲನೆ ಭಾನುವಾರ ನಡೆದಿದ್ದು, ಹಮ್ಸಫರ್ನ ಸಾಮಾನ್ಯ ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳು ಶೇ.20ರಷ್ಟು ಹೆಚ್ಚಿನ ದರಗಳೊಂದಿಗೆ ಮುಂದಿನ ತಿಂಗಳು ಆರಂಭಗೊಳ್ಳಲಿದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಫೆಬ್ರವರಿ ತಿಂಗಳಿನಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಕೆಲವು ಹೊಸ ರೈಲುಗಳ ಜೊತೆ ಎಸಿ 3 ಟೈಯರ್ ಹಮ್ಸಫರ್ ರೈಲನ್ನು ಪರಿಚಯಿಸಿದ್ದರು. ಹಮ್ಸಫರ್, ಸಂಪೂರ್ಣ ಹವಾನಿಯಂತ್ರಿತ ರೈಲು ಜನರಿಗೆ ಐಚ್ಛಿಕ ಊಟದ ವ್ಯವಸ್ಥೆಯನ್ನು ಹೊಂದಿದೆ ಎಂದು ಸುರೇಶ್ ಪ್ರಭು ಹೇಳಿದ್ದರು.
ಹಮ್ಸಫರ್ ಇಂಟರ್ ಸಿಟಿ ರಾತ್ರಿ ಪ್ರಯಾಣದ ವಿಶೇಷ ದರ್ಜೆಯ ರೈಲು ಇತರ ಸಾಮಾನ್ಯ 3 ಟೈಯರ್ ಎಸಿ ರೈಲುಗಳಗಿಂತ ಹೆಚ್ಚುವರಿ ಸಭಲಭ್ಯಗಳನ್ನು ಹೊಂದಿದೆ.
ಇದು ಕ್ಲೋಸ್ ಸರ್ಕ್ಯೂಟ್ ಟಿವಿ (ಸಿಸಿ ಟಿವಿ), ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಪ್ರತಿ ಬೋಗಿಗಗಳಲ್ಲಿ ಬೆಂಕಿ ಮತ್ತು ಹೊಗೆ ಪತ್ತೆ ಮತ್ತು ನಿಗ್ರಹ ವ್ಯವಸ್ಥೆ, ಮೊಬೈಲ್/ಲ್ಯಾಪ್ಟಾಪ್ ಚಾರ್ಜಿಂಗ್ ಪಾಯಿಂಟ್ಗಳಂತಹ ವಿಷಿಷ್ಟ ವ್ಯವಸ್ಥೆಯನ್ನು ಒಳಗೊಂಡಿದೆ. ಇವೆಲ್ಲದರ ಜೊತೆಗೆ ಇದು ಸಂಯೋಜಿತ ಬ್ರೈಲಿ ಡಿಸ್ಪ್ಲೇಯನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.