ರಿಯೋ: ಪಾರಾಲಿಂಪಿಕ್ಸ್ಗೆ ಅದ್ಭುತ ಛಾಯಾಚಿತ್ರಗಳನ್ನು ಸೆರೆಹಿಡಿದ ಜೋಓ ಮಾಯಿಯಾ ತಾನು ಯಾವುದನ್ನು ಕ್ಲಿಕ್ ಮಾಡುತ್ತೇನೋ ಅದನ್ನು ನೋಡೋದೇ ಇಲ್ಲವಂತೆ..
ಕಾರಣ ಇಷ್ಟೇ.. ಜೋಓ ದೃಷ್ಟಿಹೀನ ವ್ಯಕ್ತಿ. ಆದರೇನು, ಅವರ ಅಂತರ್ದೃಷ್ಟಿ ಚೆನ್ನಾಗಿದೆ. ನನ್ನ ಕಣ್ಣುಗಳೆರಡೂ ಹೃದಯದೊಳಗಿದೆ ಎನ್ನುತ್ತಾರೆ ಜೋಓ. ಅಷ್ಟಕ್ಕೂ ನೀವು ಫೊಟೋ ತೆಗೆಯಬೇಕಾದರೆ ಏನು ತೆಗೆಯುತ್ತೀರೋ ಅದನ್ನು ನೋಡೋದೇ ಬೇಡ. ಅವನ್ನು ಅನುಭವಿಸಿದರಷ್ಟೇ ಸಾಕು ಎಂದು ಜೋಓ ಕಂಡುಕೊಂಡ ಥಿಯರಿ.
ಕಣ್ಣಿದ್ದ ಉಳಿದ ಫೊಟೋಗ್ರಾಫರ್ಗಳು ಇದು ಸಾಧ್ಯವೇ ಇಲ್ಲ ಅಂದುಕೊಂಡಿದ್ದನ್ನು ಜೋಓ ಮಾಡಿ ತೋರಿಸಿದ್ದಾರಂತೆ. ಅವರ ಚಿತ್ರಗಳು ಅಪ್ಪಟ ನುರಿತ ಫೊಟೋಗ್ರಾಫರ್ಗಳು ತೆಗೆದಿರುವಂತೆ ಇರುವುದು ಮತ್ತೊಂದು ಸೋಜಿಗ.
ಫ್ರೆಂಚ್ ಅಥ್ಲೀಟ್ ಮೇರಿ ಅಮೇಲಿ ಲೀ ಫರ್ ಲಾಂಗ್ ಜಂಪ್ ಮಾಡಿದಾಗ ಸೆರೆಹಿಡಿದ ಚಿತ್ರವೇ ಇದಕ್ಕೊಂದು ಉದಾಹರಣೆ.
ನಲ್ವತ್ತೊಂದು ವರ್ಷದ ಮಯಿಯಾ ಉತ್ಸಾಹದ ಬುಗ್ಗೆ. ಹಾಗೆಂದು ಅವರು ಹುಟ್ಟುಕುರುಡರಲ್ಲ. ಇಪ್ಪತ್ತೆಂಟು ವಯಸ್ಸಿನವರಾಗಿದ್ದ ಸಂದರ್ಭ ಕಣ್ಣಿನ ದೋಷ ದೃಷ್ಟಿಯನ್ನೇ ಕಸಿದುಕೊಂಡಿತು.
ಪೋಸ್ಟ್ ಮ್ಯಾನ್ ಆಗಿ ದುಡಿಯುತ್ತಿರುವ ಮಾಯಿಯಾ ಬ್ರೈಲ್ ಮೂಲಕ ತರಬೇತಿ ಪಡೆದುಕೊಂಡರು.
ಅವರ ಪ್ರಕಾರ ಫೊಟೋಗ್ರಫಿ ಎಂಬುದು ಸೂಕ್ಷ್ಮತೆಗಳಿಗೆ ಸಂಬಂಧಿಸಿದ್ದು. ಅನುಭವವೇದ್ಯವಾದದ್ದು. ನಾನು ಅದನ್ನು ಸಂಪೂರ್ಣ ಆಸ್ವಾದಿಸುವೆ ಎಂಬುದು ಅವರ ಉದ್ಗಾರ. ಕೇವಲ ಶ್ರವಣಶಕ್ತಿಯಿಂದಲೇ ಅದ್ಭುತ ಚಿತ್ರಗ್ರಹಣ ಮಾಡುವ ಇವರ ಕೈಚಳಕ ಅದೆಷ್ಟೋ ಜನರಿಗೆ ಮಾದರಿ.
2020ರ ಒಲಿಂಪಿಕ್ಸ್ ಗೆ ಚಿತ್ರ ತೆಗೆಯಲು ಈಗಲೇ ಈ ಉತ್ಸಾಹಿ ಸಿದ್ಧತೆ ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.