ಲಕ್ನೌ: ಭಾರತ-ಅಮೇರಿಕಾ ರಕ್ಷಣಾ ಸಹಕಾರದ ಭಾಗವಾಗಿ ‘ಎಕ್ಸರ್ಸೈಸ್ ಯುದ್ಧ ಅಭ್ಯಾಸ್ 2016’ ಜಂಟಿ ಸೇನಾ ತರಬೇತಿಯು ಉತ್ತರಾಖಂಡ್ನ ಚೌಬಾಟ್ಟಿಯಾದ ಹಿಮಾಲಯಗಳಲ್ಲಿ ಸೆಪ್ಟೆಂಬರ್ 14ರಿಂದ 27ರ ವರೆಗೆ ನಡೆಯಲಿದೆ.
ಸೆಂಟ್ರಲ್ ಕಮಾಂಡ್ನ ಪ್ರಧಾನ ಕಚೇರಿಯ ಆಶ್ರಯದಲ್ಲಿ ಭಾರತ ಮತ್ತು ಅಮೇರಿಕಾದ ದ್ವಿಪಕ್ಷೀಯ ರಕ್ಷಣಾ ಸಹಕಾರದ ಪ್ರಯತ್ನವಾಗಿ ದೀರ್ಘಕಾಲೀನ ಜಂಟಿ ಸೇನಾ ತರಬೇತಿ ಇದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಎರಡೂ ರಾಷ್ಟ್ರಗಳ ಪರ್ಯಾಯ ಆತಿಥ್ಯದಲ್ಲಿ ನಡೆಯುತ್ತಿರುವ ತರಬೇತಿಯ 12ನೇ ಆವೃತ್ತಿ ಇದಾಗಿದೆ.
ಎಕ್ಸರ್ಸೈಸ್ ಯುದ್ಧ ಅಭ್ಯಾಸ್ ೨೦೧೬ ಎರಡೂ ರಾಷ್ಟ್ರಗಳು ವಿಶ್ ಸಂಸ್ಥೆಯ ಚಾರ್ಟರ್ (ಹಕ್ಕುಗಳು) ಅಡಿಯಲ್ಲಿ ಪರ್ವತ ಶ್ರೇಣಿಗಳಲ್ಲಿ ನಿರ್ವಹಿಸುತ್ತಿರುವ ಬಂಡಾಯ ನಿಗ್ರಹ ಮತ್ತು ಭಯೋತ್ಪಾದನೆ ವಿರೋಧಿ ಕಾರ್ಯಗಳನ್ನು ಅನುಕರಿಸಲಿವೆ ಎಂದು ಅದು ತಿಳಿಸಿದೆ.
ಈ ಸೇನಾ ತರಬೇತಿಯಲ್ಲಿ ಅಮೇರಿಕಾದ ೨೨೫ ಸೇನಾ ಸಿಬ್ಬಂದಿಗಳು ಹಾಗೂ ಭಾರತದ ಕಾಂಗೋ ಬ್ರಿಗೇಡ್ನ ೨೨೫ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ.
ಯುದ್ಧ ಅಭ್ಯಾಸ್ ೨೦೧೬ ತರಬೇತಿಯಲ್ಲಿ ಎರಡೂ ರಾಷ್ಟ್ರಗಳು ಪರಸ್ಪರ ಸಾಂಸ್ಥಿಕ ರಚನೆ, ಶಸ್ತ್ರಾಸ್ತ್ರಗಳು, ಸಾಧನಗಳು, ಯುದ್ಧ ತಂತ್ರಗಳ ಬಗ್ಗೆ ಹಂತಹಂತವಾಗಿ ಪರಿಚಿತವಾಗಲಿವೆ ಎಮದು ಪ್ರಕಟಣೆ ತಿಳಿಸಿದೆ .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.