ಬೀಜಿಂಗ್: ಚೀನಾದ 20,000 ಕಿ.ಮೀ. ಹೈ-ಸ್ಪೀಡ್ ಬುಲೆಟ್ ರೈಲು ಸಂಪರ್ಕ ಮಾರ್ಗದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಚೀನಾದ ಹೆನಾನ್ ಪ್ರಾಂತ್ಯದ ಕೇಂದ್ರ ಭಾಗದಲ್ಲಿರುವ ಜೆಂಝುದಿಂದ ಜಿಯಾಂಗ್ಸು ಪ್ರಾಂತ್ಯದ ಕ್ಸುಝುಗೆ ಸಂಪರ್ಕ ಸಾಧಿಸುವ ಹೈ-ಸ್ಪೀಡ್ ರೈಲ್ವೆ ಟ್ರ್ಯಾಕ್ ಸಂಚಾರಕ್ಕೆ ಸಿದ್ಧಗೊಂಡಿದೆ.
ಭಾರತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧೆಗೆ ಇಳಿದಿರುವ ಚೀನಾದ ಹೈ-ಸ್ಪೀಡ್ ರೈಲ್ವೆಯು 20,000 ಕಿ.ಮೀ. ರೈಲ್ವೆ ಮಾರ್ಗದ ಕಾರ್ಯವನ್ನು ಪೂರ್ಣಗೊಳಿಸಿದ್ದು, ಇದು ವಿಶ್ವದ ಅತೀ ದೊಡ್ಡ ಬುಲೆಟ್ ರೈಲು ಸಂಪರ್ಕ ಮಾರ್ಗವಾಗಿದೆ.
ಈ ರೈಲು ಮಾರ್ಗದ ನಿರ್ಮಾಣ ಕಾರ್ಯ ಡಿಸೆಂಬರ್ 2012ರಲ್ಲಿ ಆರಂಗೊಂಡಿದ್ದು, ಎಪ್ರಿಲ್ 2016ರಲ್ಲಿ ರೈಲು ಮಾರ್ಗದ ಪರೀಕ್ಷಾಋರ್ಥ ಕಾರ್ಯಾಚರಣೆ ನಡೆಸಲಾಗಿತ್ತು.
ಭಾರತ ಮತ್ತಿತರ ರಾಷ್ಟ್ರಗಳಲ್ಲಿ ಬುಲೆಟ್ ರೈಲು ಸಂಪರ್ಕ ಜಾಲ ನಿರ್ಮಾಣದ ಮಾರುಕಟ್ಟೆ ಸೃಷ್ಟಿಸಲು ಚೀನಾ ಮತ್ತು ಜಪಾನ್ ಪೈಪೋಟಿ ನಡೆಸುತ್ತಿವೆ.
ಮುಂಬಯಿ-ಅಹ್ಮದಾಬಾದ್ ನಡುವೆ ಹೈ-ಸ್ಪೀಡ್ ರೈಲು ನಿರ್ಮಿಸಲು ಭಾರತದೊಂದಿಗೆ ಜಪಾನ್ ಒಪ್ಪಂದ ಮಾಡಿಕೊಂಡಿದ್ದು, ಚೀನಾ ದೆಹಲಿ-ಚೆನ್ನೈ ನಡುವೆ ಬುಲೆಟ್ ರೈಲು ಟ್ರ್ಯಾಕ್ ನಿರ್ಮಿಸುವ ಬಗ್ಗೆ ಅಧ್ಯಯನ ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.