ನವದೆಹಲಿ: ರಾಷ್ಟ್ರಗಳು ‘ನಾನ್ ಸ್ಟೇಟ್ ಆ್ಯಕ್ಟರ್’ಗಳನ್ನು ದೂರಿದಲ್ಲಿ ತಮ್ಮ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪಾಕಿಸ್ಥಾನದ ವಿರುದ್ಧ ಭಾರತ ವಾಗ್ದಾಳಿ ನಡೆಸಿದೆ.
ಭಾರತದ ಮೇಲೆ ನಾನ್ ಸ್ಟೇಟ್ ಆ್ಯಕ್ಟರ್ಗಳು ದಾಳಿ ನಡೆಸಿದ್ದರು ಎಂಬ ಪಾಕ್ ಹೇಳಿಕೆಗೆ ತಿರುಗೇಟು ನೀಡಿದ ಭಾರತ, ರಾಜ್ಯ ಮತ್ತು ರಾಜ್ಯೇತರ ಸಂಘಟನೆಗಳು ಎಂದು ವಿಭಜಿಸುವುದು ಒಂದು ತಪ್ಪು ಪರಿಕಲ್ಪನೆಯಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್. ಜಯಶಂಕರ್ ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧ ಪಾಕಿಸ್ಥಾನದ ಕ್ರಮದ ವಿರುದ್ಧ ಭಾರತಕ್ಕೆ ಅಮೇರಿಕಾದ ಬೆಂಬಲದ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಅವರು ಕೆಲವೇ ಕೆಲವು ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ಕೈಗೊಂಡು ಇತರ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳದೇ ಕೈಬಿಡುವ ಮೂಲಕ ಸಮರ್ಥನೆ ನೀಡುವುದು ಸಮಂಜಸವಲ್ಲ ಎಂದು ಹೇಳಿದ್ದಾರೆ.
ರಾಜ್ಯ ಮತ್ತು ರಾಜ್ಯೇತರ ಭಯೋತ್ಪಾದಕ ಗುಂಪುಗಳ ನಡುವೆ ನಂಟಿರುವ ಕಾರಣ ಅವರಿಗೆ ಪ್ರಾಯೋಜಕರು ಎಂಬ ಪದ ಬಳಸಲಾಗಿದೆ. ಆದ್ದರಿಂದ ರಾಜ್ಯ, ರಾಜ್ಯೇತರ ಎನ್ನುವ ಮೂಲಕ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಪರಿಸ್ಥಿತಿ 9/11 ದಾಳಿಯ ಬಳಿಕವೂ ಮುಂದುವರೆದಿದೆ ಎಂದು ಜೈಶಂಕರ್ ಹೇಳಿದ್ದಾರೆ.
ಕೆಲವೇ ಕೆಲವು ಗುಂಪುಗಳ ವಿರುದ್ಧ ಕ್ರಮ ಕೈಗೊಂಡು ಇತರರಿಗೆ ಬೆಂಬಲ ನೀಡುವುದು ಸರಿಯಲ್ಲ. ಭಯೋತ್ಪಾದನೆ ವಿರುದ್ಧ ಪ್ರತ್ಯೇಕ, ವಿಭಜಿತ ಹೋರಾಟ ನಡೆಸಬಾರದು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.