ಟೋಕಿಯೋ: ಉತ್ತರ ಕೊರಿಯಾದ ಪರಮಾಣು ಪರೀಕ್ಷೆ ನಡೆಯುವ ಭೂಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ 5.3 ತೀವ್ರತೆಯ ಕೃತಕ ಭೂಕಂಪ ಸಂಭವಿಸಿದ್ದು, ಅದು ತನ್ನ ಐದನೇ ಪರಮಾಣು ಪರೀಕ್ಷೆ ನಡೆಸಿರಬಹುದು ಎಂದು ವಿಶ್ಲೇಷಕರು ಊಹಿಸಿದ್ದಾರೆ.
ಇನ್ನೊಂದೆಡೆ ಅಮೇರಿಕಾ ವಿರುದ್ಧ ತನ್ನ ಹಗೆ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಪರಮಾಣು ಸ್ಫೋಟ ನಡೆಸಿರುವುದಾಗಿ ಉತ್ತರ ಕೊರಿಯಾ ಖಚಿತಪಡಿಸಿದೆ ಎನ್ನಲಾಗಿದೆ.
ಉತ್ತರ ಕೊರಿಯಾ ಕಮ್ಯೂನಿಸ್ಟ್ ಆಡಳಿತದ 68ನೇ ಗಣರಾಜ್ಯ ಸ್ಥಾಪನಾ ದಿನದ ಅಂಗವಾಗಿ ಅಣು ಪರೀಕ್ಷೆ ನಡೆಸಿದೆ ಎಂತಲೂ ಹೇಳಲಾಗುತ್ತಿದೆ.
ಉತ್ತರ ಕೊರಿಯಾದ ಪುಂಗ್ಯೆ-ರಿ ಸಮೀಪ ಈ ಹಿಂದೆ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದ ಪ್ರದೇಶದಲ್ಲಿ ಅಲ್ಲಿಯ ಸ್ಥಳೀಯ ಕಾಲಮಾನ ಬೆಳಗ್ಗೆ 9 ಗಂಟೆಗೆ 5.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದು ಪರಮಾಣು ಸ್ಪೋಟದಿಂದ ಸಂಭವಿಸಿರಬಹುದು ಎಂದು ಅಮೇರಿಕಾದ ಭೌಗೋಳಿಕ ಸಮೀಕ್ಷೆ ವರದಿ ತಿಳಿಸಿದೆ.
ಉತ್ತರ ಕೊರಿಯಾದ ರಾಷ್ಟ್ರೀಯ ಭದ್ರತಾ ಮಂಡಳಿ ತುರ್ತು ಸಭೆ ಕರೆದಿದ್ದರ ಹಿನ್ನಲೆಯಲ್ಲಿ ಅದು ಪರಮಾಣು ಸ್ಫೋಟ ನಡೆಸಿರಬಹುದು ಎಂದು ಜಪಾನ್ ಕೂಡ ಹೇಳಿದೆ.
ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಜನವರಿ ತಿಂಗಳಿನಲ್ಲಿ ಹೈಡ್ರೋಜನ್ ಬಾಂಬ್ ಸ್ಪೋಟ ಎಂದು ಪ್ರತಿಪಾದಿಸಲಾಗಿದ್ದ 4ನೇ ಪರಮಾಣು ಪರೀಕ್ಷೆಗೆ ಆದೇಶ ನೀಡಿದ್ದು, ಇತರ ರಾಷ್ಟ್ರಗಳಲ್ಲಿ ಆತಂಕ ಹುಟ್ಟಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.