ಜಿಎಸ್‌ಟಿ ಮಸೂದೆಗೆ ರಾಷ್ಟ್ರಪತಿಗಳ ಅನುಮೋದನೆ

Published on : September 08, 2016,
By :
Share on FacebookTweet about this on TwitterShare on Google+

pranab-mukherjee1
ನವದಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗುರುವಾರ ಕೇಂದ್ರ ಸರ್ಕಾರದ ಪ್ರಮುಖ ಸರಕು ಮತ್ತು ಸೇವಾ ತೆರಿಗೆ ಮಸೂದೆಗೆ ಅನುಮೋದನೆ ನೀಡಿದ್ದಾರೆ. ಇದು ಪರೋಕ್ಷ ತೆರಿಗೆಯನ್ನು ದೂರವಿಡಲಿದ್ದು, ಒಂದು ದೇಶ- ಒಂದು ತೆರಿಗೆ ಸೂತ್ರವನ್ನು ಜಾರಿಗೆ ತರಲಿದೆ.

ರಾಷ್ಟ್ರಪತಿಗಳ ಅನುಮೋದನೆಯ ಬಳಿಕ ಕೇಂದ್ರ ಸರ್ಕಾರ ಈಗ ಜಿಎಸ್‌ಟಿ ಮಸೂದೆಯನ್ನು ಕೇಂದ್ರ ಮತ್ತು ರಾಜ್ಯಗಳಲ್ಲಿ ಜಾರಿಗೆ ತರುವ ಕಾರ್ಯದತ್ತ ಕೇಂದ್ರೀಕರಿಸಲಿದೆ. ದೇಶದ 31 ರಾಜ್ಯಗಳ ಪೈಕಿ 16 ರಾಜ್ಯಗಳು ಈ ಮಸೂದೆಯನ್ನು ಅಂಗೀಕರಿಸಿವೆ.

ಆಗಸ್ಟ್ ತಿಂಗಳಿನಲ್ಲಿ ರಾಜ್ಯಸಭೆ ಮತ್ತು ಲೋಕಸಭೆಗಳಲ್ಲಿ ಸರ್ವಾನುಮತದಿಂದ ಜಿಎಸ್‌ಟಿ ಬಿಲ್ ಅಂಗೀಕಾರಗೊಂಡಿದ್ದು, ಸರ್ಕಾರ ಎಪ್ರಿಲ್ 1ರ ಗಡುವಿನ ಒಳಗೆ ಜಾರಿಗೆ ತರುವ ಪ್ರಯತ್ನ ನಡೆಸಲಿದೆ.

ಜಿಎಸ್‌ಟಿ ಮಂಡಳಿನ್ನು ಶೀಘ್ರದಲ್ಲೇ ರೂಪಿಸಬೇಕಿದ್ದು, ಇದು ಇತರ ಬಾಕಿ ಕಾರ್ಯಗಳನ್ನು ನಿರ್ವಹಿಸಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

 

Leave a Reply