ನವದೆಹಲಿ: ಪ್ರಸ್ತುತ ಪ್ರವೃತ್ತಿಯಲ್ಲೇ ಮುಂದುವರಿದರೆ ಭಾರತ ತನ್ನ ಜಾಗತಿಕ ಶೈಕ್ಷಣಿಕ ಬದ್ಧತೆ ಸಾಧನೆಯ ಗುರಿ ತಲುಪಲು 50 ವರ್ಷ ವಿಳಂಬವಾಗಲಿದೆ. 2030ರ ಒಳಗಾಗಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು ಬಯಸಿದಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಯ ಅಗತ್ಯವಿದೆ ಎಂದು ಯುನೆಸ್ಕೋ ವರದಿ ತಿಳಿಸಿದೆ.
ಭಾರತ ಸೇರಿದಂತೆ ದಕ್ಷಿಣ ಏಷ್ಯಾ ರಾಷ್ಟ್ರಗಳು 2050ರಲ್ಲಿ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣದ ಗುರಿ ತಲುಪಲಿದ್ದು, 2060ರಲ್ಲಿ ಸಾರ್ವತ್ರಿಕ ಕಿರಿಯ ಪ್ರೌಢ ಶಿಕ್ಷಣ ಮತ್ತು 2085ರಲ್ಲಿ ಸಾರ್ವತ್ರಿಕ ಹಿರಿಯ ಪ್ರಾಥಮಿಕ ಶಿಕ್ಷಣದ ಗುರಿ ತಲುಪಲಿದೆ ಎಂದು ಅಂದಾಜಿಸಲಾಗಿದೆ.
ಈ ಮೂಲಕ 2030ರ ಸುಸ್ಥಿರ ಅಭಿವೃದ್ಧಿ ಧ್ಯೇಯಗಳ ( ) ಗಡುವಿಗಿಂತ 50 ವರ್ಷ ತಡವಾಗಿ ಗುರಿ ತಲುಪಲಿದೆ ಎಂದು ಅದು ಹೇಳಿದೆ.
ಶಿಕ್ಷಣದಲ್ಲಿ ಹೆಚ್ಚಿನ ಅಭಿವೃದ್ಧಿ ವ್ಯವಸ್ಥೆಯ ತುರ್ತು ಅಗತ್ಯವಿದ್ದು, ಈ ವಲಯದಲ್ಲಿ ಪ್ರಸ್ತುತ ಸವಾಲುಗಳನ್ನು ಪೂರೈಸಲು ಪ್ರಮುಖ ರೂಪಾಂತರದ ಅಗತ್ಯವಿದೆ ಎಂದು ಯುನೆಸ್ಕೋ ತನ್ನ ವರದಿಯಲ್ಲಿ ಹೇಳಿದೆ.
ಹೆಚ್ಚಿನ ರಾಷ್ಟ್ರಗಳಲ್ಲಿ ಹವಾಮಾನ ಬದಲಾವಣೆಯ ಅರಿವು ಮೂಡಿಸಲು ಶಿಕ್ಷಣವು ಅತ್ಯುತ್ತಮ ಸೂಚಕ. ವಿಶ್ವದ ಅರ್ಧದಷ್ಟು ರಾಷ್ಟ್ರಗಳು ಪಠ್ಯಗಳಲ್ಲಿ ಹವಾಮಾನ ಬದಲಾವಣೆಯನ್ನು ಉಲ್ಲೇಖಿಸುವುದಿಲ್ಲ. ಭಾರತ ಇದಕ್ಕೆ ಹೊರತಾಗಿದ್ದು, ಭಾರತದಲ್ಲಿ ಸದ್ಯ 300 ಮಿಲಿಯನ್ ಶಾಲಾ ವಿದ್ಯಾರ್ಥಿಗಳು ಪರಿಸದ ಬಗ್ಗೆ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.