ಲಂಡನ್: ಜಪಾನ್ ಸರ್ಕಾರದ 60 ವರ್ಷಗಳಷ್ಟು ಹಳೆಯ ಒಂದು ವರ್ಗೀಕೃತ ದಾಖಲೆ, ಈ ಹಿಂದಿನ ತನಿಖೆ ಮತ್ತು ಅಧಿಕೃತ ವರದಿಗಳ ಆಧಾರದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಆಗಸ್ಟ್ 18, 1945ರಲ್ಲಿ ತೈವಾನ್ನಲ್ಲಿ ಸಂಭವಿಸಿದ ವಿಮಾನ ಅಪಫಾತದಲ್ಲಿ ಮೃತಪಟ್ಟಿರುವುದಾಗಿ ದಾಖಳೆ ಬಿಡುಗಡೆ ಮಾಡಿದೆ.
ಒಂದು ಯುಕೆ ವೆಬ್ಸೈಟ್ Bosefiles.info, ನೇತಾಜಿ ಸಾವಿನ ಸುತ್ತಲಿನ ಸನ್ನಿವೇಶಗಳ ಸಾಕ್ಷಿಗಳ ದಾಖಲೆಗಳನ್ನು ಕ್ರೋಢೀಕರಿಸಿದ್ದು, ‘ನೇತಾಜಿ ಅವರ ಸಾವಿಗೆ ಕಾರಣಗಳು ಮತ್ತು ಇತರ ವಿಚಾರಗಳು’ ಎಂಬ ಶೀರ್ಷಿಕೆ ಅಡಿಯಲ್ಲಿ ಮೊದಲ ಬಾರಿಗೆ ವರದಿ ಬಿಡುಗಡೆ ಮಾಡಲಾಗಿದೆ. ಇದು ಜಪಾನ್ ಅಧಿಕಾರಿಗಳು ವರ್ಗೀಕರಿಸಿದ ಹಿನ್ನೆಲೆಯಲ್ಲಿ ಈವರೆಗೆ ಬಿಡುಗಡೆ ಮಾಡಿರಲಿಲ್ಲ ಎಂದು ತಿಳಿಸಿದೆ.
ಈ ವರದಿ ಜನವರಿ 1956ರಲ್ಲಿ ಪೂರ್ಣಗೊಂಡಿದ್ದು, ಟೊಕಿಯೋದ ಭಾರತೀಯ ರಾಯಭಾರಿಗೆ ಸಲ್ಲಿಸಲಾಗಿತ್ತು. ಆದರೆ ಇದು ವರ್ಗೀಕೃತ ದಾಖಲೆಯಾಗಿದ್ದರಿಂದ ಎರಡೂ ಸರ್ಕಾರಗಳು ಈ ವರದಿ ಬಿಡುಗಡೆ ಮಾಡಿಲ್ಲ ಎಂದು ವೆಬ್ಸೈಟ್ ಹೇಳಿದೆ.
ಜಪಾನ್ನ 7 ಪುಟಗಳ ವರದಿ ಮತ್ತು ಇಂಗ್ಲಿಷ್ನಲ್ಲಿ ಇದರ 10 ಪುಟಗಳ ಅನುವಾದಿತ ವರದಿ, ಆಗಸ್ಟ್ 18ರಂದು ಬೋಸ್ ಅವರು ವಿಮಾನ ಅಪಘಾತಕ್ಕೆ ಎದುರಾಗಿದ್ದು, ಅಂದು ಸಂಜೆ ತೈಪೆಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು ಎಂದು ಹೇಳಿದೆ.
ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ತಕ್ಷಣವೇ ವಿಮಾನ ನೆಲಕ್ಕೆ ಉರುಳಿದ್ದು, ಬೋಸ್ ಅವರು ಗಾಯಗೊಂಡಿದ್ದರು. ಅವರನ್ನು ಮಧ್ಯಾಹ್ನ 3 ಗಂಟೆಗೆ ತೈಪೆ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಅಂದು ಸಂಜೆ 7 ಗಂಟೆ ಸುಮಾರಿಗೆ ಮೃತಪಟ್ಟರು. ತೈಪೆ ಪಾಲಿಕೆಯ ಚಿತಾಗಾರದಲ್ಲಿ ಆ.22ರಂದು ಅವರ ಅಂತ್ಯಕ್ರಿಯೆ ನಡೆಸಲಾಯಿತು ಎಂದು ವರದಿ ತಿಳಿಸಿದೆ.
ವಿಮಾನ ನೆಲದಿಂದ 20 ಮಿಟರ್ ಹಾರಾಟ ನಡೆಸಿದ ಬಳಿಕ ಮೂರು ರೆಕ್ಕೆಗಳ ವಿಮಾನದ ಎಡಗಡೆ ರೆಕ್ಕೆ ಮುರಿದು ಇಂಜಿನ್ ನೆಲಕ್ಕೆ ಬಿದ್ದಿದೆ. ವಿಮಾನದಿಂದ ಬೆಂಕಿ ಭುಗಿಲೆದ್ದು, ಸಂಪೂರ್ಣ ಸುಟ್ಟು ಹೋಗಿರುವುದಾಗಿ ವರದಿ ಹೇಳಿದೆ.
ಜನವರಿ 2016ರಿಂದ ಕೇಂದ್ರ ಸರ್ಕಾರ ಬೋಸ್ ಅವರಿಗೆ ಸಂಬಂಧಿಸಿದ ನೂರಾರು ಕಡತಗಳ ದಾಖಲೆಗಳನ್ನು ವರ್ಗೀಕರಿಸಿ ತನಿಖೆ ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.