ನವದೆಹಲಿ: ಇ-ರಿಕ್ಷಾ ಮತ್ತು ಇ-ಕಾರ್ಟ್ಗಳಿಗೆ ರಸ್ತೆಗಳಲ್ಲಿ ಸಂಚರಿಸಲು ಪರವಾನಿಗೆಯ ಅಗತ್ಯವಿಲ್ಲ. ಆದರೆ ರಾಜ್ಯ ಸರ್ಕಾರಗಳು ಕೆಲವು ಪ್ರದೇಶಗಳಲ್ಲಿ ಸೂಕ್ತ ಸಂಚಾರ ನಿಯಮಗಳ ಅಡಿಯಲ್ಲಿ ಕೆಲವು ನಿರ್ಬಂಧಗಳನ್ನು ಹೇರಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಇ-ರಿಕ್ಷಾ ಹಾಗೂ ಇ-ಕಾರ್ಟ್ಗಳು ಪರವಾನಿಗೆ ಇಲ್ಲದೇ ಕಾರ್ಯ ನಿರ್ವಹಿಸಬಹುದು ಎಂದು ಹೇಳಿರುವುದಾಗಿ ಅಧಿಕೃತ ಪ್ರಕಟಣೆ ತಿಳಿಸಿದೆ.
ಅಧಿಸೂಚನೆ ಪ್ರಕಾರ, ಇ-ರಿಕ್ಷಾ ಮತ್ತು ಇ-ಕಾರ್ಟ್ಗಳಿಗೆ ಮೋಟಾರ್ ವಾಹನಗಳ ಕಾಯಿದೆ 1988ರ ಸೆಕ್ಷನ್ 66ರ ಉಪ ಪರಿಚ್ಛೇದ (1) ಅನ್ವಯಿಸುವುದಿಲ್ಲ.
ಸರ್ಕಾರ ಈಗಾಗಲೇ ಇ-ರಿಕ್ಷಾಗಳ ವೇಗ ಮಿತಿ, ಸಾಮರ್ಥ್ಯ, ಆಕಾರ ವಿಶ್ಲೇಷಣೆ ಸೇರಿದಂತೆ ಇತರ ನಿಯಮಗಳ ಮಾರ್ಗಸೂಚಿ ಜಾರಿಗೊಳಿಸಿದೆ.
ಅಧಿಸೂಚನೆ ಪ್ರಕಾರ, ಇ-ರಿಕ್ಷಾಗಳು 4 ಮಂದಿ ಪ್ರಯಾಣಿಕರು, 40 ಕೆಜಿ ಸಾಮಾನು ಹಾಗೂ ಇ-ಕಾರ್ಟ್ಗಳು 310 ಕೆಜಿ ಸರಕು ಸಾಗಿಸಲು ಅನುಮತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.