ನವದೆಹಲಿ: ಕೇಂದ್ರ ಸರ್ಕಾರ 11 ರಾಜ್ಯಗಳಲ್ಲಿ 7,457 ಕೋಟಿ ರೂ. ವೆಚ್ಚದ 16 ಹೆದ್ದಾರಿ ಯೋಜನೆಗಳಿಗೆ ಅನುಮೋದನೆ ನೀಡಿದೆ.
ಹಣಕಾಸು ಸಮಿತಿ 622 ಕಿ.ಮೀ. ಹೆದ್ದಾರಿಯ ಸುಮಾರು 7,457.88 ಕೋಟಿ ರೂ. ವೆಚ್ಚದ 16 ಯೋಜನೆಗಳಿಗೆ ಅನುಮೋದನೆ ನೀಡಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕಾರ್ಯದರ್ಶಿ ಸಂಜಯ್ ಮಿತ್ರ ತಿಳಿಸಿದ್ದಾರೆ.
ಇವುಗಳಲ್ಲಿ 13 ಯೋಜನೆಗಳನ್ನು ಇಂಜಿನಿಯರಿಂಗ್, ಖರೀದಿ ಮತ್ತು ನಿರ್ಮಾಣ ಕ್ರಮದಲ್ಲಿ, 1 ಯೋಜನೆಯನ್ನು ಹೈಬ್ರಿಡ್ ವರ್ಷಾಯನ ಕ್ರಮದಲ್ಲಿ (HBA) ಹಾಗೂ ಉಳಿದ ಒಂದು ಯೋಜನೆಯನ್ನು ನಿರ್ಮಾಣ, ಕಾರ್ಯ ಮತ್ತು ವರ್ಗಾವಣೆ (BOT) ಕ್ರಮದಲ್ಲಿ ನಿರ್ಮಿಸಲಾಗಲಿದೆ.
ಈ ಯೋಜನೆ 11 ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಉತ್ತರಾಖಂಡ, ಸಿಕ್ಕಿಂ, ಅರುಣಾಚಲ ಪ್ರದೇಶ, ಅಸ್ಸಾಂ, ಛತ್ತೀಸ್ಗಢ, ಹರ್ಯಾಣ, ಗುಜರಾತ್, ಒಡಿಸಾಗಳಲ್ಲಿ ನಡೆಯಲಿವೆ.
ಹೈಬ್ರಿಡ್ ಅನ್ಯುಯಿಟಿ ಕ್ರಮದಡಿ 905 ಕೋಟಿ ರೂ. ವೆಚ್ಚದ 2 ಯೋಜನೆಗಳು ನಿರ್ಮಾಣಗೊಳಲ್ಲಿವೆ. ಮಹಾರಾಷ್ಟ್ರದಲ್ಲಿ 1,338 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಸಂಜಯ್ ಮಿತ್ರ ಹೇಳಿದ್ದಾರೆ.
ಇದು ಬೋಟ್ ಯೋಜನೆಯಡಿ ಹರ್ಯಾಣ-ಪಂಜಾಬ್ ಗಡಿಯ ರಾ.ಹೆ.71ರ ಚತುಷ್ಪಥ ಕಾರ್ಯ, 248 ಕೋಟಿ ರೂ. ಮತ್ತು 200 ಕೋಟಿ ರೂ. ವೆಚ್ಚದಲ್ಲಿ ರಾ.ಹೆ. 58ರ ಸುಧಾರಣೆ ಮತ್ತು ಅಗಲೀಕರಣ ಕಾರ್ಯ ಯೋಜನೆಗಳು ಸೇರಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.