ಮುಂಬಯಿ : ಶೈಕ್ಷಣಿಕ ಕ್ಷೇತ್ರದಲ್ಲಿ ಜಾಗತಿಕವಾಗಿ ಮೆರೆದು ಅಗ್ರಗಣ್ಯ ಸ್ಥಾನದೊಂದಿಗೆ ಸರ್ವೋತ್ಕೃಷ್ಟವೆನಿಸಿಕೊಂಡ ತುಳು ಕನ್ನಡಿಗರ ರಾಯನ್ ಇಂಟರ್ನ್ಯಾಶನಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ನ ಶಾರ್ಜಾ (ಯುಎಇ) ದಲ್ಲಿನ ರಾಯನ್ ಇಂಟರ್ನ್ಯಾಶನಲ್ ಶಾಲಾ ವಿದ್ಯಾರ್ಥಿಗಳ ಸಹಯೋಗವು ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸೇರ್ಪಡೆಗೊಳಿಸುವಲ್ಲಿ ಯಶ ಕಂಡು ರಾಯನ್’ಸ್ ಸಮೂಹವು ತನ್ನ ಪ್ರತಿಷ್ಠೆಯ ಕೀರಿಟಕ್ಕೆ ಮತ್ತೊಂದು ಗರಿಯನ್ನು ಮೂಡಿಸಿದೆ.
ಬರೀ ಶಿಕ್ಷಣವನ್ನೇ ಉದ್ದೇಶವಾಗಿರಿಸದೆ, ರಾಷ್ಟ್ರದ ವಿದ್ಯಾರ್ಥಿಗಳ ಭವಿಷ್ಯವನ್ನು ಜಾಗತಿಕವಾಗಿ ನಿರ್ಧಾರಿಸುವಲ್ಲಿ ಶ್ರಮಿಸಿ ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲೂ ತಮ್ಮ ಸಂಸ್ಥೆ ಹಾಗೂ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಅನನ್ಯ ಸೇವೆಗೈದಂತೆ ಶಾರ್ಜಾದಲ್ಲಿನ ರಾಯನ್ ಶಾಲಾ ವಿದ್ಯಾರ್ಥಿಗಳು ಬಡಮಕ್ಕಳಿಗಾಗಿ ಅಲ್ಪಾವಧಿಯಲ್ಲಿ ದಾನವಾಗಿಸುವಲ್ಲಿ 2,05,122 ಬಟ್ಟೆಗಳನ್ನು ಸಂಗ್ರಹಿಸಿ ನೂತನ ದಾಖಲೆ ನಿರ್ಮಿಸಿದ್ದಾರೆ. ಈ ಬಗ್ಗೆ ಕಳೆದ ವಾರ ವರ್ಲ್ಡ್ ಗಿನ್ನೆಸ್ ರೆಕಾರ್ಡ್ ಸಂಸ್ಥೆಯು ಬಟ್ಟೆಗಳ ಸಂಗ್ರಹಣಾ ಪರಿಶೀಲಿಸಿ ಪ್ರಮಾಣಿಕರಿಸಿ ಮಾನ್ಯತಾ ಪತ್ರವನ್ನು ಪ್ರದಾನಿಸಿ ಶುಭ ಹಾರೈಸಿದೆ.
ಗಿನ್ನೆಸ್ ವಿಶ್ವ ದಾಖಲೆಯ ಸಂಭ್ರಮಾಚರಣೆಯನ್ನು ಆಚರಿಸಿದ ರಾಯನ್ ಇಂಟರ್ನ್ಯಾಷನಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ನ ಕಾರ್ಯಾಧ್ಯಕ್ಷ ಡಾ| ಎ.ಎಫ್ ಪಿಂಟೋ, ಪ್ರವರ್ತಕಿ ಮೇಡಂ ಗ್ರೇಸ್ ಪಿಂಟೋ ಮತ್ತು ಪ್ರಧಾನ ಕಾರ್ಯನಿರ್ವಹಣಾ ಅಧಿಕಾರಿ ರಾಯನ್ ಎ.ಪಿಂಟೋ ಸೇರಿದಂತೆ ಸಂಭ್ರಮಾಚರಣೆಯಲ್ಲಿ ನಗರದಲ್ಲಿನ ರಾಯನ್’ಸ್ ಶಾಲೆಗಳಲ್ಲಿನ ಸೆಲೆಬ್ರೆಟಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.