ನವದೆಹಲಿ: ರೈಲ್ವೆ ನಿಲ್ದಾಣಗಳಲ್ಲಿ ಲಾಡ್ಜಿಂಗ್ ವ್ಯವಸ್ಥೆಗೆ ಬೇಡಿಕೆ ಹೆಚ್ಚುತ್ತಿದ್ದು, ಗಂಟೆಯ ಆಧಾರದಲ್ಲಿ ವಿಶ್ರಾಂತಿ ಕೊಠಡಿಗಳ ಬುಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿದೆ. ರೈಲ್ವೆ ಇಲಾಖೆ ಬುಕಿಂಗ್ ನಿಯಮವನ್ನು 12ರಿಂದ 24 ಗಂಟೆಗೆ ಪರಿಷ್ಕರಿಸಿದೆ.
ರೈಲ್ವೆಯು ದೇಶದ ಎಲ್ಲ ರೈಲು ನಿಲ್ದಾಣಗಳಲ್ಲೂ ಪ್ರಯಾಣಿಕರಿಗೆ ವಿಶ್ರಾಂತಿ ಕೊಠಡಿಗಳ ವ್ಯವಸ್ಥೆಯನ್ನು ಕಲ್ಪಿಸಲಿದ್ದು, ಆರಂಭದಲ್ಲಿ ಪ್ರಮುಖ ನಿಲ್ದಾಣಗಳಾದ ಮುಂಬಯಿ, ಅಹ್ಮದಾಬಾದ್, ಸೂರತ್ಗಳಲ್ಲಿ ಕಾರ್ಯ ನಿರ್ವಹಿಸಲಿದೆ. ನಂತರ ದೇಶದ ಇತರ ರೈಲು ನಿಲ್ದಾಣಗಳಿಗೆ ವಿಸ್ತರಿಸಲಿದೆ.
ಪ್ರಸ್ತುತ, ವಿಶ್ರಾಂತಿ ಕೊಠಡಿ ಬುಕಿಂಗ್ 12 ಮತ್ತು 24 ಗಂಟೆಗಳ ಆಧಾರದಲ್ಲಿ ಆಯಾ ಸ್ಲಾಟ್ಘಲಿಗೆ ಸುಂಕದ ಜೊತೆಗೆ ಬುಕಿಂಗ್ ಮಾಡಲಾಗುತ್ತದೆ.
ಪರಿಷ್ಕೃತ ಬದಲಾದ ನಿಯಮದಂತೆ ವಿಶ್ರಾಂತಿ ಕೊಠಡಿಗಳನ್ನು ಕನಿಷ್ಟ 3 ತಾಸು ಹಾಗೂ ಗರಿಷ್ಟ 48 ತಾಸುಗಳಿಗೆ ಬುಕಿಂಗ್ ಮಾಡಬಹುದಾಗಿದೆ.
ಆದಾಗ್ಯೂ, ರಾತ್ರಿ 9ರಿಂದ ಬೆಳಗ್ಗೆ 9 ಗಂಟೆಯ ವರೆಗೆ ಸಂಪೂರ್ಣ 12 ತಾಸುಗಳ ಅವಧಿಗೆ ಬುಕಿಂಗ್ ಮಾಡಬೇಕಾದ ಕಾರಣ ಈ ವೇಳೆಯಲ್ಲಿ ಬುಕಿಂಗ್ ಮಾಡಲು ಅವಕಾಶ ನೀಡಲಾಗುವುದಿಲ್ಲ. ಇದಕ್ಕೆ ಗಂಟೆಯ ಆಧಾರದಲ್ಲಿ ಸುಂಕ ವಿಧಿಸಲಾಗುತ್ತದೆ.
ಐಆರ್ಸಿಟಿಸಿ ವೆಬ್ಸೈಟ್ ಮೂಲಕ ವಿಶ್ರಾಂತಿ ಕೊಠಡಿಗಳ ಬುಕಿಂಗ್ ಮಾಡಬಹುದಾಗಿದೆ. ಖಚಿತ ಮತ್ತು ಆರ್ಎಸಿ ಟಿಕೆಟ್ ಹೊಂದಿದ ಪ್ರಯಾಣಿಕರಿಗೆ ಮಾತ್ರ ಈ ವ್ಯವಸ್ಥೆ ಲಭ್ಯವಿರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.