ಐಎನ್‌ಎ, ಐಐಎಲ್‌ನ ದೇಣಿಗೆ ಪಾಕ್‌ನೊಂದಿಗೆ ಹಂಚಿಕೊಳ್ಳಲು 1953 ರಲ್ಲಿ ಭಾರತ ಒಪ್ಪಿತ್ತು

Published on : August 31, 2016,
By :
Share on FacebookTweet about this on TwitterShare on Google+

Netaji

ನವದೆಹಲಿ : ಸ್ವಾತಂತ್ರ್ಯ ಸೇನಾನಿ ಸುಭಾಷ್‌ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿ ಮತ್ತು ಇಂಡಿಯನ್ ಇಂಡಿಪೆಡೆನ್ಸ್ ಲೀಗ್‌ನ ದೇಣಿಗೆಗಳನ್ನು ಪಾಕಿಸ್ಥಾನದೊಂದಿಗೆ ಹಂಚಿಕೊಳ್ಳಲು 1953 ರಲ್ಲಿ ಭಾರತ ಒಪ್ಪಿಕೊಂಡಿತ್ತು ಎನ್ನಲಾಗಿದೆ.

ಮಂಗಳವಾರ ಬಹಿರಂಗಗೊಂಡ ನೇತಾಜಿಗೆ ಸಂಬಂಧಿಸಿದ ದಾಖಲೆಗಳಿಂದ ಈ ಅಂಶ ಬಹಿರಂಗಗೊಂಡಿದೆ.

1953 ರ ಆಗಸ್ಟ್ 18 ರಂದು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಆಗಿನ ಪಶ್ಚಿಮಬಂಗಾಳ ಮುಖ್ಯಮಂತ್ರಿ ಬಿ.ಸಿ.ರಾಯ್ ಅವರಿಗೆ ಬರೆದ ಪತ್ರದಲ್ಲಿ ಪಾಕಿಸ್ಥಾನದೊಂದಿಗೆ ದೇಣಿಗೆ ಹಂಚಿಕೆ ಬಗ್ಗೆ ಉಲ್ಲೇಖವಿದೆ ಎನ್ನಲಾಗಿದೆ.

ನೇತಾಜಿ ಮತ್ತು ಅವರ ಆಜಾದ್ ಹಿಂದ್ ಗರ್ವನ್‌ಮೆಂಟ್‌ಗೆ ಸಂಬಂಧಿಸಿದ ದೇಣಿಗೆಗಳ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವ ಸಲುವಾಗಿ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಪ್ರಸ್ತಾವನೆಯನ್ನು ಅನುಮೋದನೆಗೊಳಿಸಲಾಗಿತ್ತು.

ಇದಕ್ಕೆ ಪ್ರತಿಕ್ರಿಯೆಯಾಗಿ ನೆಹರೂ ಅವರು ಬಿ.ಸಿ.ರಾಯ್ ಅವರಿಗೆ ಪತ್ರ ಬರೆದಿದ್ದರು.

ಐಎನ್‌ಎ, ಐಐಎಲ್‌ನ ಅಧಿಕಾರಿಗಳು ಮತ್ತು ಇತರರಿಂದ ಅದಕ್ಕೆ ಸಂಬಂಧಿಸಿದ ಹಲವಾರು ಬಂಗಾರ, ಆಸ್ತಿ, ಅಮೂಲ್ಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಇದರಲ್ಲಿ ಭಾಗವನ್ನು ತನಗೆ ಬೇಕೆಂದು ಪಾಕಿಸ್ಥಾನ ಕೂಡಾ ಕೇಳಿತ್ತು. ಹೀಗಾಗಿ ಅದರೊಂದಿಗೆ ಮಾತುಕತೆ ನಡೆದಿದ್ದು, ದೇಣಿಗೆಯನ್ನು 2:1 ಪ್ರಮಾಣದಲ್ಲಿ ಉಭಯ ದೇಶಗಳ ನಡುವೆ ಪಾಲು ನಡೆಸುವ ನಿರ್ಧಾರಕ್ಕೆ ಪಾಕಿಸ್ಥಾನ ಮತ್ತು ಭಾರತ ಒಪ್ಪಿಕೊಂಡಿತ್ತು ಎಂದು ಪತ್ರದಲ್ಲಿ ನೆಹರು ಉಲ್ಲೇಖಿಸಿದ್ದರು.

ಮಂಗಳವಾರ 7ನೇ ಹಂತವಾಗಿ 25 ದಾಖಲೆಗಳುಳ್ಳ ನೇತಾಜಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಂದ್ರ ಸಂಸ್ಕೃತಿ ಸಚಿವ ಎನ್. ಕೆ. ಸಿನ್ಹಾ ಅವರು ಬಿಡುಗಡೆಗೊಳಿಸಿದ್ದಾರೆ.

 

Leave a Reply