ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ಅವರ ಎರಡು ಪ್ರಮುಖ ಯೋಜನೆಗಳಾದ ಸ್ವಚ್ಛ ಭಾರತ ಅಭಿಯಾನ ಹಾಗೂ ಮೇಕ್ ಇನ್ ಇಂಡಿಯಾ ಯೋಜನೆಗಳನ್ನು ಅನುಷ್ಠಾನದ ನಿಟ್ಟಿನಲ್ಲಿ ಮುಂಬಯಿಯ ಯುವಕರು ಹೊಸ ಮಾದರಿಯ ಕಸ ಸಂಗ್ರಾಹಕ ನಿರ್ಮಿಸಿದ್ದಾರೆ.
ಮುಂಬಯಿಯ ಇವರು ಅಭಿವೃದ್ಧಿ ಪಡಿಸಿದ ಕಸ ಸಂಗ್ರಾಹಕಕ್ಕೆ ಟೆಕ್ಬಿನ್ (Techbin) ಎಂದು ಹೆಸರಿಡಲಾಗಿದೆ. ಈ ಕಸ ಸಂಗ್ರಾಹಕದಲ್ಲಿ ಕಸ ಹಾಕಿದರೆ ಪ್ರತಿಯಾಗಿ ಒಂದು ಚಾಕಲೇಟ್ ಕಸ ಹಾಕಿದವರಿಗೆ ಸಿಗುತ್ತದೆ. ಇಂತಹ ಒಂದು ವಿಶಿಷ್ಟ, ಆಕರ್ಷಿತ ವಿನ್ಯಾಸ ಹೊಂದಿರುವ ಟೆಕ್ಬಿನ್ ತಯಾರಿಸಲಾಗಿದ್ದು, ಸದ್ಯಕ್ಕೆ ಏಳು ಸ್ಥಳಗಳಲ್ಲಿ ಇದನ್ನಿರಿಸಲಾಗಿದೆ.
ಸೆಪ್ಟೆಂಬರ್ 1 ರಿಂದ 5ರ ವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಆತಿಥ್ಯವನ್ನು ಟೆಕ್ಬಿನ್ ವಹಿಸಲಿದೆ.
ಲೋನಾವಾಲಾ ಪುರಸಭೆಗೆ ಒಂದು ಟೆಕ್ಬಿನ್ ಉಚಿತವಾಗಿ ನೀಡಲಾಗಿದೆ. ಚಾಕಲೇಟ್ ಉಡುಗೊರೆಯಾಗಿ ನೀಡುವ ಪ್ರಕ್ರಿಯೆಯಿಂದ ಜನರಲ್ಲೂ ಕಸ ಸಂಗ್ರಹಣೆಯ ಬಗ್ಗೆ ಹೆಚ್ಚಿನ ಅರಿವು ಮೂಡುವುದಲ್ಲದೆ ಇದು ಉತ್ತಮ ಕಾರ್ಯವೂ ಆಗಲಿದೆ. ಟೆಕ್ಬಿನ್ ವಿಶಿಷ್ಟತೆಯಿಂದ ಪ್ರೇರಿತರಾಗಿ ಈಗಾಗಲೇ 10 ಟೆಕ್ಬಿನ್ ಆರ್ಡರ್ ಮಾಡಲಾಗಿದೆ ಎಂದು ಕೌನ್ಸಿಲ್ನ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರತಿ ಟೆಕ್ಬಿನ್ ಉತ್ಪಾದನಾ ವೆಚ್ಚ 45,000 ಆಗಿದೆ. ಟೆಕ್ಬಿನ್ ಮೇಲ್ಭಾಗದಲ್ಲಿ ಜಾಹೀರಾತುಗಳಿಗೆ ಅವಕಾಶ ನೀಡಲಾಗಿದ್ದು, ನಿರ್ಮಾಣ ತಂಡ ಜಾಹೀರಾತುಗಳ ಮೂಲಕ ಆದಾಯ ಪಡೆಯುಲಿದೆ ಎನ್ನಲಾಗಿದೆ.
ಚಲನಚಿತ್ರೋತ್ಸವ ಸಂಘಟಕರು ಇದಕ್ಕೆ ಜಾಹೀರಾತು ನೀಡುವವರಲ್ಲಿ ಮೊದಲಿಗರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.