News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸ್ಮಶಾನ ನಿರ್ಮಾಣಕ್ಕೆ ಸಾರ್ವಜನಿಕರ ವಿರೋಧ

ಬಂಟ್ವಾಳ: ಸಜಿಪಮೂಡ ಗ್ರಾಮದ ಬೊಳ್ಳಾಯಿ-ಪಟ್ಟುಗುಡ್ಡೆ ಎಂಬಲ್ಲಿ ಸಾರ್ವಜನಿಕರ ವಿರೋಧ ಹಾಗೂ ಪಂಚಾಯತ್‌ರಾಜ್ ಕಾಯ್ದೆ ಉಲ್ಲಂಘಿಸಿ ಜನವಸತಿ ಪ್ರದೇಶದಲ್ಲಿ ಹಿಂದೂ ಸ್ಮಶಾನ ನಿರ್ಮಿಸುತ್ತಿರುವುದರ ವಿರುದ್ಧ ತೀವ್ರ ಆಕ್ರೋಶಗೊಂಡ ಸ್ಥಳೀಯ ನಾಗರಿಕರು ಬುಧವಾರ ಬಿ.ಸಿ. ರೋಡ್‌ನ ತಹಶೀಲ್ದಾರ್ ಕಚೆರಿ ಮುಂಭಾಗದಲ್ಲಿ ಧರಣಿ ಪ್ರತಿಭಟನೆ ನಡೆಸಿದರು.

26bntph-strike

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಮಾಹಿತಿ ಹಕ್ಕು ಕಾರ್ಯಕರ್ತ ಗಣಪತಿ ಭಟ್ ಅವರು ಸಜಿಪಮೂಡ ಗ್ರಾಮದ ಬಾಬ್ತು ಸರ್ವೆ ನಂಬ್ರ 246/1ಎ2 ರಲ್ಲಿ 0.45 ಎಕ್ರೆ ಜಮೀನನ್ನು ಸರಕಾರ ಸಾರ್ವಜನಿಕ ಸ್ಮಶಾನಕ್ಕಾಗಿ ಕಾಯ್ದಿರಿಸಿದ್ದು, ಬಳಿಕ ಕೆಲ ಪ್ರಭಾವಿ ವ್ಯಕ್ತಿಗಳು ತಮ್ಮ ಜಮೀನು ಉಳಿಸಿಕೊಳ್ಳುವ ಉದ್ದೇಶದಿಂದ ಸ್ಮಶಾನಕ್ಕೆ ಮಂಜೂರಾದ ಜಮೀನನ್ನು ಬಿಟ್ಟು ಸರ್ವೆ ನಂಬ್ರ 246/1ಎ1ಬಿ ಯಲ್ಲಿ ಅನಧಿಕೃತ ಕಣ್ಣಳತೆಯ ನಕ್ಷೆಯಂತೆ ಸ್ಥಳ ಗುರುತಿಸುವಂತೆ ಅಧಿಕಾರಿಗಳನ್ನು ದಾರಿ ತಪ್ಪಿಸಿ ಅಲ್ಲೇ ಸ್ಮಶಾನ ಕಾರ್ಯ ಪ್ರಾರಂಭಿಸಿದರು.

ಈ ಬಗ್ಗೆ ಸಹಾಯಕ ಆಯುಕ್ತರು ನೀಡಿರುವ ಆದೇಶ ಕಾನೂನು ಬಾಹಿರ ಹಾಗೂ ಅಧಿಕಾರ ದುರ್ಬಳಕೆ ಎಂದು ಆರೋಪಿಸಿದರಲ್ಲದೆ ಸದ್ರಿ ಸ್ಥಳದ 100 ಮೀಟರ್ ವ್ಯಾಪ್ತಿಯಲ್ಲಿ 30 ವಾಸ್ತವ್ಯದ ಮನೆಗಳು, 4 ಕುಡಿಯುವ ನೀರಿನ ಬಾವಿಯಿದೆ. ಇದು ಪಂಚಾಯತ್‌ರಾಜ್ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಸ್ಮಶಾನ ಭೂಮಿಯನ್ನು ಸಜಿಪಮೂಡ ಗ್ರಾಮದಲ್ಲೇ ನಿರ್ಮಿಸಲಿ. ಆದರೆ ಸರಕಾರಿ ಜಮೀನು ಗ್ರಾಮದಲ್ಲಿ ಬೇಕಾದಷ್ಟಿದೆ. ಜನ ಹಿತಕ್ಕೆ ಧಕ್ಕೆಯಾಗದ ರೀತಿಯಲ್ಲಿ ಸ್ಮಶಾನ ನಿರ್ಮಾಣಕ್ಕೆ ಗ್ರಾಮಸ್ಥರು ಜಾತಿ-ಮತ ಭೇದ ಮರೆತು ಒಗ್ಗಟ್ಟಾಗಿ ಸಹಕಾರ ನೀಡುತ್ತಾರೆ. ಪ್ರಸ್ತುತ ಪ್ರಸ್ತಾಪಿತ ಜಮೀನಿನಲ್ಲಿ ಸ್ಮಶಾನ ನಿರ್ಮಾಣ ಅದು ಪಂಚಾಯತ್‌ರಾಜ್ ಕಾಯ್ದೆಯ ಕಲಂ 95, 96, 88, 92, 93 ಹಾಗೂ 94(2) ರ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಗಣಪತಿ ಭಟ್ ವಿವರಿಸಿದರು.

ಬಳಿಕ ಪತಿಭಟನಾಕಾರರು ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಅವರಿಗೆ ತಮ್ಮ ಬೇಡಿಕೆಗಳನ್ನೊಳಗೊಂಡ ಮನವಿ ಸಲ್ಲಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top