ನವದೆಹಲಿ: ತಪ್ಪು ಮಾಹಿತಿ ನೀಡಿ, ಪ್ರಚಾರ ಗಿಟ್ಟಿಸುವ ಮೂಲಕ ಜನರನ್ನು ಆಕರ್ಷಿಸುವ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳಿಗೆ ಶಿಕ್ಷೆ ವಿಧಿಸುವ ಬಿಲ್ನ್ನು ಗ್ರಾಹಕರ ವ್ಯವಹಾರಗಳ ಸಚಿವಾಲಯ ತಯಾರಿಸಿದ ಕರಡು ಮಸೂದೆ ಬಗ್ಗೆ ಆಂತರಿಕ ಸಚಿವರ ಸಮಿತಿ ಮಂಗಳವಾರ ಚರ್ಚಿಸಲಿದೆ.
ಕಟ್ಟುನಿಟ್ಟಿನ ನಿಬಂಧನೆಗಳ ಕರಡು ಮಸೂದೆಯಲ್ಲಿ ಸೆಲೆಬ್ರಿಟಿಗಳಿಗಳಿಗೆ ಮೊದಲ ಬಾರಿ ಅಪರಾಧಕ್ಕೆ 10 ಲಕ್ಷ ರೂ. ದಂಡ ಮತ್ತು ಎರಡು ವರ್ಷ ಜೈಲು ಶಿಕ್ಷೆ ಸೇರಿವೆ. ನಂತರದ ಅಪರಾಧಗಳಿಗೆ 50 ಲಕ್ಷ ರೂ. ದಂಡ ಹಾಗೂ ಗರಿಷ್ಟ 5 ವರ್ಷ ಜೈಲು ಶಿಕ್ಷೆ ವಿಧಿಸಲಿದೆ.
ಕಳೆದ ಆಗಸ್ಟ್ನಲ್ಲಿ ಕೇಂದ್ರ ಸರ್ಕಾರ ಗ್ರಾಹಕ ಭದ್ರತೆ ಬಿಲ್ 2015ನ್ನು ಪರಿಚಯಿಸಿದ್ದು, ಉತ್ಪನ್ನಗಳ ತಪ್ಪು ಮಾಹಿತಿ ಮತ್ತು ಪ್ರಚಾರ ಮಾಡುವ ಸೆಲೆಬ್ರಿಟಿಗಳ ವಿರುದ್ಧದ ಈ ಬಿಲ್ನ್ನು ಸಂಸದೀಯ ಸ್ಥಾಯಿ ಸಮಿತಿ ಎಪ್ರಿಲ್ನಲ್ಲಿ ಶಿಫಾರಸ್ಸು ಮಾಡಿತ್ತು.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ಆಂತರಿಕ ಸಚಿವ ಸಮಿತಿಯು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್, ಆರೋಗ್ಯ ಸಚಿವ ಜೆ.ಪಿ. ನಡ್ಡಾ, ಸಾರಿಗೆ ಸಚಿವ ನಿತಿನ್ ಗಡ್ಕರಿ, ಕಾನೂನು ಸಚಿವ ರವಿಶಂಕರ್ ಪ್ರಸಾದ್, ವಿದ್ಯುತ್ ಸಚಿವ ಪಿಯುಶ್ ಗೋಯಲ್ ಹಾಗೂ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಒಳಗೊಂಡಿದೆ.
ಸಂಸತ್ ಸ್ಥಾಯಿ ಸಮಿತಿ ಅತೀ ಶೀಘ್ರದಲ್ಲೇ ಈ ಬಗ್ಗೆ ವರದಿ ಸಲ್ಲಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.