ನವದೆಹಲಿ: ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಅವರ ಕಾರ್ಯಾವಧಿ ಸೆಪ್ಟೆಂಬರ್ 4ರಂದು ಪೂರ್ಣಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಬ್ಯಾಂಕ್ ಸಿಬ್ಬಂದಿಗಳು ಬಣ್ಣಗಳಿಂದ ಭಾವಚಿತ್ರ ರಚಿಸಿ ರಾಜನ್ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಆರ್ಬಿಐ ಗವರ್ನರ್ ರಾಜನ್ ಅವರಿಗೆ ವಿದಾಯ ಗೌರವ ಮತ್ತು ಮೆಚ್ಚುಗೆ ವ್ಯಕ್ತಪಡಿಸುವ ಈ ರಂಗೋಲಿಯ ಮಧ್ಯ ಭಾಗದಲ್ಲಿ ರಘುರಾಮ್ ರಾಜನ್ ಅವರ ಚಿತ್ರ, ಅದರ ಸುತ್ತಲೂ ವಿವಿಧ ಕರೆನ್ಸಿ ನೋಟುಗಳ ವಿನ್ಯಾಸ ಹೊಂದಿತ್ತು.
ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್, ಬರಹಗಾರ, ರಾಜಕೀಯ ಮತ್ತು ಆರ್ಥಿಕ ವಿಚಾರಗಳ ವಿಮರ್ಶಕರಾಗಿರುವ ಎಸ್. ಗುರುಮೂರ್ತಿ, ‘ಆರ್ಬಿಐ ಮುಖ್ಯಸ್ಥ ರಾಜನ್ ಅವರ ಬೀಳ್ಕೊಡುಗೆ ಸಂಬಂಧ ಆರ್ಬಿಐ ಸಿಬ್ಬಂದಿಗಳಿಂದ ರಂಗೋಲಿ. ಫೆಡೆರಲ್ ಬ್ಯಾಂಕ್ ಅಥವಾ ಇಸಿಬಿ ಮುಖ್ಯಸ್ಥರು ಇಂತಹ ಸ್ಮರಣೀಯ, ಪ್ರೀತಿಯ ಸೂಚಕಗಳನ್ನು ಪಡೆಯಲಾರರು’ ಎಂಬ ಶೀರ್ಷಿಕೆಯಡಿ ಈ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.
ಈ ರಂಗೋಲಿಯನ್ನು ಅತೀ ಸಮೀಪದಿಂದ ಗಮನಿಸಿದರೆ ‘ಕಭೀ ಅಲ್ವಿದಾ ನಾ ಕೆಹೆನಾ’ ಎಂಬ ಸಂದೇಶ ಕಾಣುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.