ಮಿನ್ನೆಪಾಲಿಸ್: ಹೊಸ 3D ಪ್ರಿಂಟಿಂಗ್ ತಂತ್ರಜ್ಞಾನ ಇತ್ತೀಚೆಗೆ ಅನಾವರಣಗೊಂಡಿದ್ದು, ಅಟೋಮೊಬೈಲ್, ವಿಮಾನಯಾನ, ಇತರ ನಿರ್ಮಾಣ ಉದ್ಯಮಗಳಲ್ಲಿ ಸಾಧನಗಳ ತಯಾರಿಕೆ ಮತ್ತು ಮರುನಿರ್ಮಾಣದ ಗಾತ್ರವನ್ನು ಹೆಚ್ಚಿಸಲಿದೆ.
3D ಮುದ್ರಣ ಯಂತ್ರ ತಯಾರಕ Stratasys ಪರಿಚಯಿಸಿದ ಒಂದು ಅಪ್ಲಿಕೇಶನ್ ವಿಮಾನಯಾನದ ಇಂಟೀರಿಯರ್ಗಳನ್ನು ಕಂಪ್ಯೂಟರ್ನ ಒಂದು ಕ್ಲಿಕ್ನಲ್ಲೇ ಗಾತ್ರ ಹೆಚ್ಚಿಸಿ ದೊಡ್ಡದಾಗಿ ತೋರಿಸಲಿದೆ. ವಿಮಾನದ ಸಮತಲ (horizontal) ಚಿತ್ರವನ್ನು ಉದ್ದವಾಗಿ(vertical) ಪರಿವರ್ತಿಸಿದಲ್ಲಿ ಪ್ರಿಂಟರ್ನಲ್ಲಿ ಇದರ ಭಾಗಗಳನ್ನು ಅನಿಯಮಿತ ಪ್ರಮಾಣದಲ್ಲಿ ರಚಿಸಲು ಸಾಧ್ಯವಾಗಲಿದೆ.
3D ಮುದ್ರಣ ನೈಲಾನ್, ರೆಸಿನ್, ಥರ್ಮೋಪ್ಲಾಸ್ಟ್, ಮಣ್ಣು, ತಂತು ವಸ್ತುಗಳ ಮೇಲೆ ಮುದ್ರಣ ವಸ್ತುಗಳನ್ನು ನಿರ್ದೇಶಿಸಲು ಅತ್ಯಾಧುನಿಕ ಕಂಪ್ಯೂಟರ್ ತಂತ್ರಾಂಶಗಳನ್ನು ಬಳಸುತ್ತದೆ.
ಲೋಹದ ಬದಲು ಪ್ಲಾಸ್ಟಿಕ್ ಬಳಕೆಯ ಮೂಲಕ ತೂಕ ಕಡಿಮೆಯಾಗಿಸುವುದು ಇದರ ಪ್ರಮುಖ ಪ್ರಯೋಜನಗಳಲ್ಲಿ ಒಂದಾಗಿದೆ. ಡಿಜಿಟಲ್ ಉಪಕರಣ ಮತ್ತು ನಿರ್ಮಾಣ ಆದೇಶ ತಂತ್ರಜಾನದಿಂದ ಇದು ಉಗ್ರಾಣದ ಸ್ಥಳ ಹಾಗೂ ಅನೇಕ ಸಾಂಪ್ರದಾಯಿಕ ತಯಾರಿಕಾ ಪರಿಕರಗಳ ಅಗತ್ಯತೆಯನ್ನು ಕಡಿಮೆ ಮಾಡಲಿದೆ. ಇದು ಈವರೆಗೆ ಬಳಸುತ್ತಿದ್ದ ಸರಕುಗಳಿಗೆ ಸಮಾನ ಗುಣಮಟ್ಟ ಮತ್ತು ಅಗ್ಗದ, ಬೇಗನೇ ತಯಾರಿಸಬಹುದಾದ ವಸ್ತುಗಳನ್ನು ಪಡೆಯಲಿದೆ.
Stratasys ಜೊತೆ ಪಾಲುದಾರಿಕೆ ಹೊಂದಿದ ಕಾರ್ಪೋರೇಟ್ ಕಂಪೆನಿಗಳಾದ ಬೋಯಿಂಗ್, ಸೀಮೆನ್ಸ್ ಮತ್ತು ಫೋರ್ಡ್ ಮಿನ್ನೆಪಾಲಿಸ್ನ ಈಡನ್ ಪ್ರೈರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.