ಮುಂಬೈ : ತಮ್ಮ ರೇಡಿಯೋ ಕಾರ್ಯಕ್ರಮದಲ್ಲಿ ದೇಶದ ಜನರು ಬರೆಯುವ ಪತ್ರಗಳನ್ನು ಪ್ರಧಾನಿಯವರು ಓದುತ್ತಾರೆ ಎಂಬುದನ್ನು ಅರಿತುಕೊಂಡ ಮುಂಬೈಯಿಯ 9 ನೇ ತರಗತಿಯ ಬಾಲಕಿಯೊಬ್ಬಳು ತಾನೂ ಒಂದು ಪತ್ರವನ್ನು ಬರೆದು ಕಳುಹಿಸಿದ್ದಾಳೆ.
ಸಾಕ್ಷಿ ತಿವಾರಿಯು ತಾನು ಕಲಿಯುತ್ತಿರುವ ನವಿ ಮುಂಬಯಿಯ ಶಾಲೆಯಲ್ಲಿ ಆಡಲು ಆಟದ ಮೈದಾನವಿಲ್ಲ. ಹೀಗಾಗಿ ಒಂದು ಮೈದಾನವನ್ನು ನಮಗೆ ನಿರ್ಮಿಸಿಕೊಡುವಂತೆ ಪ್ರಧಾನಿಗೆ ಪತ್ರ ಮುಖೇನ ಮನವಿ ಮಾಡಿದ್ದಾಳೆ.
ತನ್ನ ಶಾಲೆಯಲ್ಲಿ ಓಪನ್ ಗ್ರೌಂಡ್ ನಿರ್ಮಾಣಕ್ಕಾಗಿ ಬೇಕಾದ ಜಾಗವಿಲ್ಲ. ಒಲಿಂಪಿಕ್ಸ್ನಲ್ಲಿ ಭಾರತವನ್ನು ಮಿಂಚುವಂತೆ ಮಾಡಬೇಕು ಎಂಬುದು ನಮ್ಮ ಆಸೆ. ಆದರೆ ಇದಕ್ಕೆ ಹಲವಾರು ಸವಾಲುಗಳು ಎದುರಾಗುತ್ತಿವೆ. ಎಂಬುದಾಗಿ ಆಕೆ ಪತ್ರದಲ್ಲಿ ತಿಳಿಸಿದ್ದಾಳೆ.
ಆಕೆಯ ಪತ್ರಕ್ಕೆ ಸ್ಪಂದಿಸಿರುವ ಪ್ರಧಾನಿ ಸಚಿವಾಲಯ, ನವೀ ಮುಂಬಯಿ ಸಮೀಪದ ಮೈದಾನವೊಂದನ್ನು ಆಕೆಯ ಶಾಲೆಯ ವಿದ್ಯಾರ್ಥಿಗಳ ಉಪಯೋಗಕ್ಕೆ ನೀಡುವಂತೆ ಅಲ್ಲಿನ ಜಿಲ್ಲಾಡಳಿತಕ್ಕೆ ತಿಳಿಸಿದೆ.
ಇದೀಗ ಆಕೆಯ ಶಾಲೆಗೆ ಸ್ವಂತವಾಗಿ ಮೈದಾನ ನಿರ್ಮಿಸುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.
ಪುಟ್ಟ ಬಾಲಕಿಯೊಬ್ಬಳ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರಧಾನಿಗೆ ಶ್ಲಾಘನೆಗಳು ವ್ಯಕ್ತವಾಗುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.