ವ್ಯಾಪಾರ ವೃದ್ಧಿಗೆ ಉದ್ಯಮ ವಾತಾವರಣವನ್ನು ಉತ್ತಮಪಡಿಸಿ ಎಂದ ಅಮೇರಿಕಾ

Published on : August 29, 2016,
By :
Share on FacebookTweet about this on TwitterShare on Google+

US

ವಾಷಿಂಗ್ಟನ್ : ಭಾರತದೊಂದಿಗಿನ ಆರ್ಥಿಕ ಬಾಂಧವ್ಯಗಳನ್ನು ವೃದ್ಧಿಸುವ ಬಗ್ಗೆ ಒಲವು ತೋರಿರುವು ಅಮೇರಿಕಾ ಉಭಯ ದೇಶಗಳ ವ್ಯವಹಾರ 109 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಇದು ಜಿಎಸ್‌ಟಿಯಂತಹ ಹೊಸ ಸುಧಾರಣೆಗಳಿಂದ ಮತ್ತಷ್ಟು ವೃದ್ಧಿಸುವ ಸಾಧ್ಯತೆ ಇದೆ ಎಂದು ಹೇಳಿದೆ.

ಅಲ್ಲದೆ ಅಮೇರಿಕಾದ ಉದ್ಯಮ ಸಂಸ್ಥೆಗಳು ಭಾರತದ ಉದ್ಯಮ ವಾತಾವರಣದ ಬಗ್ಗೆ ಅಷ್ಟೊಂದು ಒಲವನ್ನು ಹೊಂದಿಲ್ಲ. ಆದರೂ ಉಭಯ ದೇಶಗಳ ವ್ಯಾಪಾರ ವೃದ್ಧಿಗೆ ಇದು ದೊಡ್ಡ ಅಡೆತಡೆ ಉಂಟು ಮಾಡಿಲ್ಲ. ಆದರೆ ಭಾರತ ಈ ವಿಷಯಗಳನ್ನು ನಿವಾರಿಸಲು ಪ್ರಯತ್ನಿಸಬೇಕು ಎಂದಿದ್ದಾರೆ.

ಅಮೇರಿಕಾದ ವಾಣಿಜ್ಯ ಕಾರ್ಯದರ್ಶಿ ಪೆನ್ನಿ ಪ್ರಿಟ್ಜ್ಕರ್ ಅವರು ಇವತ್ತಿನಿಂದ ಮೂರು ದಿನಗಳ ಕಾಲ ಭಾರತಕ್ಕೆ ಭೇಟಿ ಕೊಡುತ್ತಿದ್ದಾರೆ.

ಭೇಟಿ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ಪ್ರಯಾಣ, ಪ್ರವಾಸ ಮತ್ತು ಉಪ ರಾಷ್ಟ್ರೀಯ ನಿರ್ಧಾರಗಳು 2017 ರಲ್ಲಿ ಉಭಯ ದೇಶಗಳ ವಾಣಿಜ್ಯ ಸಹಕಾರಕ್ಕೆ ಅತಿ ಮುಖ್ಯವಾದ ಎರಡು ವಲಯಗಳು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ 7 ವರ್ಷಗಳಿಂದ ಉಭಯ ದೇಶಗಳ ವಾಣಿಜ್ಯ ಬಾಂಧವ್ಯದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ನಮ್ಮ ದೇಶಗಳು ವ್ಯಾಪಾರ ಮತ್ತು ಬಂಡವಾಳ ಸಂಬಂಧವನ್ನು ಮುಕ್ತಮನಸ್ಸಿನಿಂದ ಆಸ್ವಾದಿಸುತ್ತಿದೆ ಎಂದರು.

 

Leave a Reply