ನವದೆಹಲಿ: ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ದೇಶದ ಗ್ರಾಮೀಣ ಭಾಗಗಳಲ್ಲಿ ಪ್ರಚಾರ ಮತ್ತು ಅರಿವು ಮೂಡಿಸುವ ಕಾರ್ಯಚಟುವಟಿಕೆಯನ್ನು ಉತ್ತಮಗೊಳಿಸುವ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ವೃತ್ತಿಪರ ಖಾಸಗಿ ಏಜೆನ್ಸಿಗಳ ಜೊತೆ ಒಪ್ಪಂದ ಮಾಡಲಿದೆ.
ಪ್ರಸ್ತುತ ಮಾಹಿತಿ ಮತ್ತು ಪ್ರಸಾರ (ಐ&ಬಿ) ಅಡಿಯಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯ (ಡಿಇಪಿ) ದೇಶದಾದ್ಯಂತ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಅರಿವು ಮೂಡಿಸುವ ಕಾರ್ಯ ನಿರ್ವಹಿಸುತ್ತಿದೆ.
ಡಿಇಪಿ ರಚಿಸಿರುವ ಒಂದು ಸಮಿತಿ ದೇಶದಾದ್ಯಂತ ‘ಮೀಡಿಯಾ ಬ್ಲ್ಯಾಕ್ ಸ್ಪಾಟ್ಸ್’ ಪಟ್ಟಿಯನ್ನು ತಯಾರಿಸುತ್ತಿದ್ದು, ಅಗ್ರ ಸಂಸ್ಥೆಗಳು ಸರ್ಕಾರದ ಪ್ರಮುಖ ಯೋಜೆಗಳು ಹಾಗೂ ಕಾರ್ಯಕ್ರಮಗಳ ಜಾಗೃತಿಯನ್ನು ಮೂಡಿಸಲಿವೆ.
‘ಮೀಡಿಯಾ ಬ್ಲಾಕ್ ಸ್ಪಾಟ್ಸ್’ ಸರ್ಕಾರ ಅಥವಾ ಮಾಧ್ಯಮಗಳು ತಲುಪದ ದೇಶದಾದ್ಯಂತ ನಿರ್ಲಕ್ಷಿತ ಪ್ರದೇಶಗಳಾಗಿವೆ. ಡಿಇಪಿ ನಿರ್ದೇಶಕ ನೀಲಂ ಕಪೂರ್ ಸಮಿತಿಯನ್ನು ನಿರ್ವಹಿಸುತ್ತಿದ್ದಾರೆ.
ಟಿವಿ, ಇಂತರ್ನೆಟ್ ಅಥವಾ ಇತರ ಮಾಧ್ಯಮಗಳ ಸಂಪರ್ಕ ಇಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ನೀತಿಗಳನ್ನು ಜನರಿಗೆ ತಲುವುದು, ಇದರ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸುವ ಉದ್ದೇಶವಾಗಿದೆ. ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಾದ ಬೇಟಿ ಪಢಾವೋ-ಬೇಟಿ ಬಚಾವೋ, ಜನ ಧನ ಯೋಜನೆಗಳ ಪ್ರಚಾರ ಮಾಡಲಾಗುತ್ತಿದ್ದು, ದೇಶದಲ್ಲಿ ಕೆಲವು ಪ್ರದೇಶಗಳಲ್ಲಿ ಮೊದಲ ಹಂತದಲ್ಲಿ ಇದರ ಪ್ರಭಾವವನ್ನು ಪರಿಶೀಲಿಸಿದ ಬಳಿಕ ಪಟ್ಟಿ ತಯಾರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.