ನವದೆಹಲಿ: ಇದೇ ಆಗಸ್ಟ್ನಲ್ಲಿ ನಡೆದ ರಿಯೋ ಒಲಿಂಪಿಕ್ಸ್ನಲ್ಲಿ ಪಿ.ವಿ. ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಅವರು ತೋರಿದ ಸಾಧನೆಯ ಬಳಿಕ ಹಲವು ಭಾರತೀಯ ಪೋಷಕರಲ್ಲಿ ಒಲಿಂಪಿಕ್ ಜ್ವರ ಹುಟ್ಟಿಸಿದೆ. ಹಲವು ಅಥ್ಲೀಟ್ಗಳ ಪೋಷಕರು ತಮ್ಮ ಮಕ್ಕಳ ಮದುವೆ ಬಗ್ಗೆ ಯೋಚಿಸುವ ಬದಲು ಕನಸುಗಳನ್ನು ಬೆನ್ನಟ್ಟಿ ಅವಕಾಶ ಪಡೆಯುವಲ್ಲಿ ಚಿಂತಿಸುತ್ತಿದ್ದಾರೆ.
ಇದಕ್ಕೆ ಉದಾಹರಣೆಯಂತೆ ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಮಣಿಲಾಲ್ ಗೊಹಿಲ್ ತನ್ನ ಪುತ್ರಿ, ರಾಷ್ಟ್ರ ಮಟ್ಟದ ಶೂಟರ್ ಮಿತ್ತಲ್ಗೆ 5 ಲಕ್ಷ ರೂ. ಮೌಲ್ಯದ ಜರ್ಮನ್ ರೈಫಲ್ ಖರೀದಿಸಿದ್ದಾರೆ. ಆಶ್ಚರ್ಯವೆಂದರೆ ಮಣಿಲಾಲ್ ಈ 5 ಲಕ್ಷ ರೂ. ಹಣವನ್ನು ತನ್ನ ಪುತ್ರಿ ಮಿತ್ತಲ್ಳ ಮದುವೆಗಾಗಿ ಕಾಯ್ದಿರಿಸಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.
ನನ್ನ ತಂದೆ ಮತ್ತು ಕುಟುಂಬ ನನ್ನ ದುಬಾರಿ ಹವ್ಯಾಸ ಪೂರೈಸಲು ಸಾಕಷ್ಟು ತ್ಯಾಗ ಮಾಡಿದ್ದಾರೆ. ಈ ರೈಫಲ್ ಪಡೆದ ನಂತರ ನಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ದೇಶವನ್ನು ಪ್ರತಿನಿಧಿಸಲು ಶ್ರಮ ಪಡುತ್ತೇನೆ ಎಂದು ಮಿತ್ತಲ್ ಹೇಳಿದ್ದಾರೆ.
ಅಹ್ಮದಾಬಾದ್ನ ಮಿತ್ತಲ್ ಈ ಹಿಂದೆ ಬಾಡಿಗೆ ರೈಫಲ್ ಪಡೆದು ರಾಷ್ಟ್ರೀಯ ಚಾಂಪಿಯನ್ಚಿಪ್ನಲ್ಲಿ ಸ್ಪರ್ಧಿಸಿ ಕಂಚಿನ ಪದಕ ಗೆದ್ದುಕೊಂಡಿದ್ದರು.
ಮಿತ್ತಲ್ರ ಈ ಹೊಸ ರೈಫಲ್ 8 ಕೆಜಿ. ತೂ ಹೊಂದಿದ್ದು, ಇದರ ಪ್ರತಿ ಬುಲೆಟ್ನ ದರ 31 ರೂ. ಆಗಿದೆ. ಇವರು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಲು ಕನಿಷ್ಟ 1000 ಸುತ್ತುಗಳ ಬುಲೆಟ್ ಖರೀದಿಸಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.