ನವದೆಹಲಿ: ಭಯೋತ್ಪಾನೆ ಸಂಬಂಧಿತ ಪ್ರಕರಣದಲ್ಲಿ ಆರೋಪಿಗಳಾಗಿರುವ 50 ಜನರನ್ನು ಪ್ರೇರೇಪಿಸಿದ ಆರೋಪದಡಿಯಲ್ಲಿ ಇಸ್ಲಾಂ ಟಿವಿ ಬೋಧಕ ಝಾಕಿರ್ ನಾಯ್ಕ್ ವಿರುದ್ಧ ಭಯೋತ್ಪಾದನೆ ಕೇಸ್ ದಾಖಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲ್ಲದೇ ಆತ ನಡೆಸುತ್ತಿದ್ದ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ನ್ನು ನ್ಯಾಯಯುತವಲ್ಲದ ಸಂಘಟನೆ ಎಂದು ಘೋಷಿಸಲಿದೆ.
ಜುಲೈ ತಿಂಗಳಿನಲ್ಲಿ ನಡೆದ ಢಾಕಾ ಮೇಲಿನ ದಾಳಿಗೆ ಪ್ರೇರಣೆ ನೀಡಿದ ಆರೋಪ ಹೊತ್ತಿರುವ ಝಾಕಿರ್ ನಾಯ್ಕ್ನ ಬೋಧನೆಗಳ ಪರಿಶೀಲನೆ ನಡೆಸಿದ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಜಿಹಾದ್ ಹುಟ್ಟು ಹಾಕುವ ವಿಚಾರಗಳ ಭಾಷಣಗಳಿಗೆ ಕಾನೂನುಬಾಹಿರ ಚಟುವಟಿಕೆ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಝಾಕಿರ್ ನಾಯ್ಕ್ ವಿರುದ್ಧ ಕೇಸ್ ದಾಖಲಿಸಲಾಗಿದ್ದು, ಆತ ತನ್ನ ಭಾಷಣಗಳಿಂದ ಪ್ರಚೋದನೆ ಮತ್ತು ಭಯೋತ್ಪಾದಕ ಕೃತ್ಯಗಳಿಗೆ ಉತ್ತೇಜಸುವ ವಿಚಾಗಳಿಂದಾಗಿ ಆತನ ವಿರುದ್ಧದ ಭಯೋತ್ಪಾದನೆ ಕೇಸ್ ದಾಖಲಿಸಲು ಪ್ರಮುಖ ಕಾರಣವಾಗಿದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಹೇಳಿದ್ದಾರೆ.
ಸಾರ್ವಜನಿಕ ಭಾಷಣಗಳು, ಚಟುವಟಿಕೆಗಳು, ಮತ್ತು ಫೌಂಡೇಷನ್ನ ಸದಸ್ಯರಿಂದ ಬಲವಂತದ ಮತಾಂತರದ ಮೂಲಕ ಧಾರ್ಮಿಕ ಸಮುದಾಯಗಳ ನಡುವೆ ದ್ವೇಷ ಹರಡಿಸುವ ಆಧಾರದ ಮೇಲೆ ಯುಎಪಿಎ ಅರ್ಜಿ ಸಲ್ಲಿಸಿ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ನಿಷೇಧಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.