ಪೋಂಗ್ಯಾಂಗ್: ಒಂದು ವಿಲಕ್ಷಣವೆಂಬಂತೆ ಶಿಕ್ಷೆಯಂತೆ ಉತ್ತರ ಕೊರಿಯಾ ಅಧಿಕಾರಿ ಕಿಮ್ ಜಾಂಗ್-ಉನ್ ರಿಯೋ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಲು ವಿಫಲವಾದ ಕ್ರೀಡಾಪಟುಗಳನ್ನು ಗಣಿಯಲ್ಲಿ ಕೆಲಸ ಮಾಡಲು ಕಳುಹಿಸುವ ಸಾಧ್ಯತೆ ಇದೆ ಎಂದು ಕೊರಿಯಾ ಟೈಮ್ಸ್ ವರದಿ ಮಾಡಿದೆ.
ವರದಿ ಪ್ರಕಾರ, ಕಿಮ್ ಜಾಂಗ್ ದೇಶದ ಕ್ರೀಡಾ ಆಯೋಗಕ್ಕೆ ಕನಿಷ್ಟ 5 ಚಿನ್ನದ ಪದಕ ಹಾಗೂ 12 ಇತರ ಪದಕಗಳನ್ನು ಗೆದ್ದು ಮರಳುವಂತೆ ಆದೇಶಿಸಿದ್ದರು. ಆದರೆ ರಿಯೋ ಒಲಿಂಪಿಕ್ಸ್ನ 9 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ 31 ಕ್ರೀಡಾಪಟುಗಳು 2 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದುಕೊಂಡಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಕ್ರೀಡಾಪಟುಗಳು 4 ಚಿನ್ನ ಮತ್ತು 2 ಕಂಚಿನ ಪದಗಳನ್ನು ಗೆದ್ದುಕೊಂಡಿದ್ದರು.
ಒಲಿಂಪಿಕ್ಸ್ ಪದಕ ವಿಜೇತರಿಗೆ ಉತ್ತಮ ವಸತಿ ವ್ಯವಸ್ಥೆ, ರೇಷನ್, ಕಾರು ಹಾಗೂ ಇತರ ಉಡುಗೊರೆಗಳನ್ನು ನೀಡಲಾಗುವುದು. ಆದರೆ ಕ್ರೀಡಾಪಟುಗಳ ನೀರಸ ಪ್ರದರ್ಶನ ಮತ್ತು ತನ್ನ ಪ್ರತಿಸ್ಪರ್ಧಿ ದಕ್ಷಿಣ ಕೊರಿಯಾ 9 ಚಿನ್ನದ ಪದಕಗಳೊಂದಿಗೆ ಒಟ್ಟು 21 ಪದಕಗಳನ್ನು ಗೆದ್ದುಕೊಂಡಿರುವುದು ಕಿಮ್ ಜಾಂಗ್ ಕೋಪಕ್ಕೆ ಕಾರಣವಾಗಿದೆ ಎಂದು ಉತ್ತರ ಕೊರಿಯಾ ನಾಯಕತ್ವದ ಅಧಿಕಾರಿ ಮತ್ತು ಟೋಕ್ಯೋ ವಿಶ್ವವಿದ್ಯಾಲಯದ ಪ್ರೊ. ಟೋಶಿಮಿಸು ಶಿಗೆಮುರ ಹೇಳಿರುವುದಾಗಿ ದ ಟೆಲಿಗ್ರಾಫ್ ವರದಿ ಮಾಡಿದೆ.
ತನ್ನ ಮರ್ಯಾದೆಗೆ ಧಕ್ಕೆ ತಂದಿದ್ದಾರೆ ಎಂದು ತೋರಿದ ಕ್ರೀಡಾಪಟುಗಳಿಗೆ ಕಳಪೆ ಮಟ್ಟದ ವಸತಿ ಸೌಲಭ್ಯ, ರೇಷನ್ನಲ್ಲಿ ಕಡಿತ ಇವೆಲ್ಲಕ್ಕಿಂತ ವಿಲಕ್ಷಣವೆಂದರೆ ಗಣಿಯಲ್ಲಿ ಕೆಲಸ ಮಾಡುವ ಶಿಕ್ಷೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.