Tuesday, 20th February 2018
×
Home About Us Advertise With s Contact Us

ತೆರೆದ ಬಾವಿಗೆ ತಡೆಗೋಡೆ ನಿರ್ಮಿಸಲು ಕ್ರಮ

ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಖಾಸಗಿ ಜಮೀನೊಂದರಲ್ಲಿ ತೆರೆದ ಪಾಳು ಬಾವಿ ಇತ್ತೀಚೆಗೆ ಸ್ವಚ್ಛತಾ ಕಾಮಗಾರಿ ನಡೆಸುತ್ತಿದ್ದ ವೇಳೆ ಸಾರ್ವಜನಿಕರ ಗಮನಕ್ಕೆ ಬಂದಿತ್ತು. ಈ ಬಗ್ಗೆ ಸಾರ್ವಜನಿಕರು ಪಂಚಾಯತ್ ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ಗಮನಕ್ಕೂ ತಂದಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಸಚಿತ್ರ ವರದಿಗಳೂ ಪ್ರಕಟಗೊಂಡಿತ್ತು.

26bntph2-bavi

ಕೊನೆಗೂ ಎಚ್ಚೆತ್ತುಕೊಂಡ ನಾವೂರು ಗ್ರಾಮ ಪಂಚಾಯತ್ ಅಧಿಕಾರಿಗಳು ಇಲ್ಲಿನ ತೆರೆದ ಪಾಳು ಬಾವಿಗೆ ತಡೆ ನಿರ್ಮಿಸಲು ಕ್ರಮ ಕೈಗೊಂಡಿದ್ದಾರೆ. ಸ್ಥಳೀಯ ಪಂಚಾಯತ್ ಪಿಡಿಒ ಅಬೂಬಕ್ಕರ್ ಅವರು ಜಮೀನು ಮಾಲಕರಿಗೆ ಬಾವಿಯನ್ನು ಮುಚಿಸುವಂತೆ ಸೂಚಿಸಿದರು. ಪಂಚಾಯತ್ ಅಧಿಕಾರಿಯ ಸೂಚನೆ ಮೇರೆಗೆ ಮಾಲಕರು ಬಾವಿಗೆ ನೈಲಾನ್ ಬಲೆಯನ್ನು ಅಳವಡಿಸಿ ಬಾವಿಯ ಸುತ್ತ ಬೇಲಿ ನಿರ್ಮಿಸಿ ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ.

ಮಣಿಹಳ್ಳ-ಸರಪಾಡಿ ಮುಖ್ಯರಸ್ತೆಯ ಬಳಿಯ ನಾವೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪಕ್ಕದಲ್ಲಿಯೇ ಇದ್ದ ಈ ತೆರೆದ ಪಾಳು ಬಾವಿ ಸಾರ್ವಜನಿಕ ರಸ್ತೆಗೂ ಅನತಿ ದೂರದಲ್ಲಿತ್ತು. ಈ ಹಿಂದೆ ಸದ್ರಿ ಜಮೀನಿಗೆ ಮಣ್ಣಿನ ತಡೆಗೋಡೆ ಹೊಂದಿತ್ತು. ಆದರರೆ ಇತ್ತೀಚೆಗೆ ನಡೆದ ಮಣಿಹಳ್ಳ-ಸರಪಾಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಸಂದರ್ಭ ತಡೆಗೋಡೆ ಕೆಡವಲಾಗಿತ್ತು. ಅಲ್ಲದೆ ಪಾಳು ಬಾವಿಯ ಸುತ್ತ ಕಳೆಗಿಡಗಳು ಬೆಳೆದಿದ್ದರಿಂದ ಅದು ಸಾರ್ವಜನಿಕರ ಗಮನಕ್ಕೆ ಬಂದಿರಲಿಲ್ಲ. ಇತ್ತೀಚೆಗೆ ಸ್ಥಳೀಯರು ನಡೆಸಿದ ಸ್ವಚ್ಛತಾ ಆಂದೋಲನದ ಸಂದರ್ಭ ೨೫ ಅಡಿ ಆಳದ ಈ ಬಾವಿ ಗಮನಕ್ಕೆ ಬಂದು, ತಕ್ಷಣವೇ ಅದನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅಧಿಕಾರಿಗಳನ್ನು ಆಗ್ರಹಿಸಿದ್ದರು.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top