ನವದೆಹಲಿ: ಕೇಂದ್ರ ಸಚಿವ ಸಂಪುಟ 9 ರಾಜ್ಯಗಳಲ್ಲಿ ರೂ. 24,374.6 ಕೋಟಿ ವೆಚ್ಚದ ರೈಲ್ವೆ ವಿಸ್ತರಣೆಯ 9 ಯೋಜನೆಗಳಿಗೆ ಅನುಮೋನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ದೇಶದಲ್ಲಿ ಮೂಲಸೌಕರ್ಯ ವಲಯವನ್ನು ಉತ್ತೇಜಿಸಲು ಹಾಗೂ ದೇಶದಾದ್ಯಂತ ರೈಲ್ವೆ ಜಾಲದ ವಿಸ್ತರಣೆ ಮತ್ತು ಸಂಪರ್ಕ ವೃದ್ಧಿಸಲು ಪೂರ್ವ ಮತ್ತು ಮಧ್ಯ ಭಾರತದ 9 ರಾಜ್ಯಗಳ ರೈಲ್ವೆ ಯೋಜನೆಗಳಿಗೆ ಅನುಮೋದನೆ ನೀಡಿದೆ.
ಅಸ್ಸಾಂನ ನ್ಯೂ ಬೊಂಗೈಗಾಂವ್-ಕಮಖ್ಯದ 176 ಕಿ.ಮೀ. ನಡುವೆ ರೂ.2586.85 ಕೋಟಿ ವೆಚ್ಚದಲ್ಲಿ 2ನೇ ರೈಲು ಮಾರ್ಗ, ಜಾರ್ಖಂಡ್ನ ಖರಗ್ಪುರ್-ಆದಿತ್ಯಪುರ್ನ 132 ಕಿ.ಮೀ. ನಡುವೆ 1483.36 ಕೋಟಿ ವೆಚ್ಚದಲ್ಲಿ 3ನೇ ಹಂತದ ರೈಲು ಮಾರ್ಗ, ಆಂಧ್ರ ಪ್ರದೇಶದ ವಿಜಯವಾಡ-ಗುಡುರ್ ನಡುವಿನ 287.67 ಕಿ.ಮೀ. ಮಾರ್ಗದಲ್ಲಿ ರೂ. 3,875.68 ಕೋಟಿ ವೆಚ್ಚದಲ್ಲಿ 3ನೇ ರೈಲು ಮಾರ್ಗ ಸೇರಿದಂತೆ ಇತರ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.