ನವದೆಹಲಿ: ಬಿಎಸ್ಎನ್ಎಲ್ ಇತರ ಕಂಪೆನಿಗಳನ್ನು ಸ್ಪರ್ಧಿಸಲು ರೂ.1099ರ 3G ಅನ್ಲಿಮಿಟೆಡ್ ಪ್ಲಾನ್ನ್ನು ಬಿಡುಗಡೆ ಮಾಡಿದೆ ಹಾಗೂ ಅಸ್ತಿತ್ವದಲ್ಲಿರುವ ಇತರ ಕೆಲವು ಪ್ಲಾನ್ಗಳ ಡಾಟಾ ಬಳಕೆ ಮಿತಿಯನ್ನು ದುಪ್ಪಟ್ಟು ಮಾಡಿದೆ.
ಇಂಟರ್ನೆಟ್ ಸುಧಾರಣೆಯಿಂದಾಗಿ ಬಿಎಸ್ಎನ್ಎಲ್ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದೆ. ಇಂಟರ್ನೆಟ್ ವೇಗವನ್ನು ಕಡಿತಗೊಳಿಸದೇ ರೂ.1099ರ 3G ಅನಿಯಮಿತ ಯೋಜನೆಯನ್ನು ಗ್ರಾಹಕರಿಗೆ ನೀಡುತ್ತಿರುವ ವೆದಲ ಟೆಲಿಕಾಂ ಕಂಪೆನಿ ಇದಾಗಿದೆ ಎಂದು ಬಿಎಸ್ಎನ್ಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರಿವಾಸ್ತವ ಹೇಳಿದ್ದಾರೆ.
ಖಾಸಗಿ ಕಂಪೆನಿಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಬಿಎಸ್ಎನ್ಎಲ್ ಡಾಟಾ ದರವನ್ನು ಶೇ.67ರಷ್ಟು ಕಡಿತಗೊಳಿಸಿತ್ತಲ್ಲದೆ ಈಗ ತನ್ನ ರೂ.549 3G ಸೇವೆಯನ್ನು 5 GBಯಿಂದ 10 ಜಿಬಿಗೆ ಏರಿಸಿದೆ. ಟೆಲಿಕಾಂ ಸಂಸ್ಥೆ ತನ್ನ ರೂ. 156ರ 3G ಡಾಟಾ ಬಳಕೆಯನ್ನು 10 ದಿನಗಳ ವ್ಯಾಲಿಡಿಟಿಯೋಂದಿಗೆ 2Gಗೆ ಹೆಚ್ಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.