ಪ್ರೇಗ್: ಖಗೋಳಶಾಸ್ತ್ರದಲ್ಲಿ ಮಂಜಿನಿಂದ ಆವೃತವಾಗಿರುಗವ ಗ್ರಹ ಪ್ಲುಟೋ ಒಂದು ಗ್ರಹವಲ್ಲ ಎಂದು ವಿಜ್ಞಾನಿಗಳು ಹೊಸ ವ್ಯಾಖ್ಯಾನಕ್ಕೆ ಮತ ಚಲಾಯಿಸುವ ಮೂಲಕ ಖಚಿತಪಡಿಸಿದ್ದಾರೆ.
ಝೆಕ್ ರಿಪಬ್ಲಿಕ್ನ ಪ್ರೇಗ್ನಲ್ಲಿ ನಡೆದ ಅಂತಾರಾಷ್ಟ್ರೀಯ ಖಗೋಳಶಾಸ್ತ್ರಜ್ಞರ ಒಕ್ಕೂಟದ ಸಭೆ (ಎಐಯು) ಯಲ್ಲಿ ಸಂಶೋಧಕರು ಈ ಹೊಸ ವ್ಯಾಖ್ಯಾನಕ್ಕೆ ಸ್ಪಷ್ಟ ಬಹುಮತ ನೀಡುವ ಮೂಲಕ ಇದನ್ನು ಖಚಿತಪಡಿಸಿದ್ದಾರೆ.
ಯಾವುದೇ ಅಧಿಕೃತ ಅರ್ಥ ಹೊಂದಿಲ್ಲದ ‘ಪ್ಲಾನೆಟ್’ (ಗ್ರಹ) ಎಂಬ ಪದಕ್ಕೆ ಒಂದು ವೈಜ್ಞಾನಿಕ ಅರ್ಥದ ಹುಟುಕಾಟ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ಲುಟೋ ಇನ್ನು ಮುಂದೆ ಕುಬ್ಜ (dwarf) ಗ್ರಹವಾಗಿರಲಿದೆ.
ಖಗೋಳದಲ್ಲಿ ಈವರೆಗೆ ಒಟ್ಟು ೪೪ ಕುಬ್ಜ ಗ್ರಹಗಳಿವೆ ಎಂದು ವಿಜ್ಞಾನಿ ಮೈಕ್ ಬ್ರೌನ್ ಹೇಳಿದ್ದಾರೆ.
ಹೊಸ ವ್ಯಾಖ್ಯಾನದ ಪ್ರಕಾರ, ಒಂದು ಪೂರ್ಣ ಪ್ರಮಾಣದ ಗ್ರಹವು ಸೂರ್ಯನಿಗೆ ಸುತ್ತು ಬರುವಂತ್ತಿದ್ದು, ತನ್ನ ಸ್ವಂತ ಗುರುತ್ವ ಬಲದಿಂದಾಗಿ ಸಾಕಷ್ಟು ದೊಡ್ಡ ದುಂಡು ಆಕಾರದ ವಸ್ತುವಾಗಿದೆ. ಅಲ್ಲದೇ ಅದು ತನ್ನ ಕಕ್ಷೆಯಲ್ಲಿ ನೆರೆಯ ಗ್ರಹದ ಮೇಲೆ ಪ್ರಾಬಲ್ಯ ಹೊಂದಿದೆ ಎಂದು ಹೇಳಲಾಗುದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.