ಅಫ್ಜಲ್ ಗುರು ಕಾರ್ಯಕ್ರಮ : ಜೆಎನ್‌ಯುನ 21 ವಿದ್ಯಾರ್ಥಿಗಳು ತಪ್ಪಿತಸ್ಥರು

Published on : August 24, 2016,
By :
Share on FacebookTweet about this on TwitterShare on Google+

JNU

ನವದೆಹಲಿ : ದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಫೆಬ್ರವರಿ 9 ರಂದು ಆಯೋಜನೆಗೊಂಡಿದ್ದ ಉಗ್ರ ಅಫ್ಜಲ್‌ಗುರು ಪರವಾಗಿ ಆಯೋಜಿಸಿದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ 21 ವಿದ್ಯಾರ್ಥಿಗಳು ತಪ್ಪಿತಸ್ಥರು ಎಂದು ತನಿಖಾ ಸಮಿತಿ ಹೇಳಿದೆ.

ಆದರೆ ಈ ವಿದ್ಯಾರ್ಥಿಗಳ ಮೇಲೆ ಈಗಾಗಲೇ ವಿಧಿಸಲಾಗಿರುವ ದಂಡದ ಮೊತ್ತವನ್ನು ಕಡಿತಗೊಳಿಸುವಂತೆ ಅದು ಸೂಚಿಸಿದೆ.  ಇವರ ಶಿಕ್ಷೆಯ ಪ್ರಮಾಣ ಇನ್ನೂ ನಿಗದಿಯಾಗಿಲ್ಲ.

ಈ ತೀರ್ಪಿನ ಬಳಿಕ ವಿದ್ಯಾರ್ಥಿಗಳಿಗೆ ಪತ್ರ ಮುಖೇನ ಈಗಾಗಲೇ ಮಾಹಿತಿ ನೀಡಲಾಗಿದೆ.

ಜೆಎನ್‌ಯುನಲ್ಲಿ ನಡೆದ ಅಫ್ಜಲ್ ಗುರು ಕಾರ್ಯಕ್ರಮದ ಬಗ್ಗೆ ಮತ್ತು ಅಲ್ಲಿ ವಿದ್ಯಾರ್ಥಿಗಳು ದೇಶದ ವಿರುದ್ಧ ಘೋಷಣೆ ಕೂಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿತ್ತು.

ಅದೀಗ 21 ಮಂದಿ ತಪ್ಪಿತಸ್ಥರು ಎಂದು ತೀರ್ಪಿತ್ತಿದೆ.

ಕಾರ್ಯಕ್ರಮದ ವೇಳೆ ದೇಶದ ವಿರುದ್ಧ ಘೋಷಣೆ ಕೂಗಿದ ಆರೋಪದ ಮೇರೆಗೆ ಕನ್ಹಯ್ಯ ಕುಮಾರ್ ಸೇರಿದಂತೆ ಮತ್ತು 3 ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು. ಅಲ್ಲದೆ 21 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಡಿಬಾರ್, ದಂಡ ಮುಂತಾದ ಶಿಕ್ಷೆಗಳನ್ನು ವಿಧಿಸಲಾಗಿತ್ತು.

ಇದರ ವಿರುದ್ಧ ವಿದ್ಯಾರ್ಥಿಗಳು 16 ದಿನಗಳ ಕಾಲ ಅಮರಣಾಂತ ಉಪವಾಸ ಕೈಗೊಂಡರೂ ವಿಶ್ವವಿದ್ಯಾನಿಲಯ ತನ್ನ ಕ್ರಮದಿಂದ ಹಿಂದಕ್ಕೆ ಸರಿದಿರಲಿಲ್ಲ.

 

Leave a Reply