ಸೌದಿಯಲ್ಲಿನ ಭಾರತೀಯರಿಗೆ ವಾಪಾಸ್ಸಾಗಲು ಸೆಪ್ಟೆಂಬರ್ 25ರ ಗಡುವು

Published on : August 24, 2016,
By :
Share on FacebookTweet about this on TwitterShare on Google+

Sushma

ನವದೆಹಲಿ : ಸೌದಿ ಅರೇಬಿಯಾದಲ್ಲಿ ಮರು ಉದ್ಯೋಗವನ್ನು ಮಾಡುವ ಅಥವಾ ಭಾರತಕ್ಕೆ ವಾಪಸ್ಸಾಗುವ ಆಯ್ಕೆಗಳ ನಡುವೆ ಸೆಪ್ಟೆಂಬರ್ 25ರೊಳಗೆ ಒಂದನ್ನು ಆರಿಸುವಂತೆ ಸೌದಿಯಲ್ಲಿ ಉದ್ಯೋಗ ಕಳೆದುಕೊಂಡು ಅತಂತ್ರರಾಗಿರುವ ಸಾವಿರಾರು ಭಾರತೀಯರಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೂಚಿಸಿದ್ದಾರೆ.

ಸೆಪ್ಟೆಂಬರ್ 25ರೊಳಗೆ ಭಾರತಕ್ಕೆ ವಾಪಸ್ಸಾಗದವರು ಆಮೇಲೆ ತಮ್ಮ ಸ್ವಂತ ಖರ್ಚಿನಲ್ಲೇ ಭಾರತಕ್ಕೆ ಮರಳಬೇಕಾಗುತ್ತದೆ. ಅವರ ಪ್ರಯಾಣದ ಖರ್ಚು ವೆಚ್ಚವನ್ನು ಸರ್ಕಾರ ಭರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಾಕಿ ಇರುವ ವೇತನವನ್ನು ಪಡೆಯಲು ಅರ್ಜಿ ಹಾಕಿ ವಾಪಾಸ್ ಬನ್ನಿ, ವೇತನ ಸಿಗುವವರೆಗೂ ಕಾದು ಕುಳಿತುಕೊಳ್ಳಬೇಡಿ. ಒಂದು ಬಾರಿ ಸೌದಿ ಸರ್ಕಾರ ಅಲ್ಲಿನ ಕಂಪೆನಿಗಳೊಂದಿಗೆ ಮಾತುಕತೆ ನಡೆಸಿ ಈ ವಿಷಯವನ್ನು ಅಂತಿಮಗೊಳಿಸಿದ ಬಳಿಕ ಬಾಕಿ ವೇತನ ನಿಮಗೆ ದೊರೆಯಲಿದೆ ಎಂದಿದ್ದಾರೆ.

ಸೆಪ್ಟೆಂಬರ್ 25 ರೊಳಗೆ ಭಾರತಕ್ಕೆ ಉಚಿತವಾಗಿ ಕರೆತರುವ ವ್ಯವಸ್ಥೆಯನ್ನು ಸರ್ಕಾರ ಮಾಡಲಿದೆ. ಆ ಬಳಿಕ ಬರುವವರು ತಮ್ಮ ಸ್ವಂತ ಖರ್ಚಿನಲ್ಲೇ ಬರಬೇಕು ಎಂದಿದ್ದಾರೆ.

ಮೂಲಗಳ ಪ್ರಕಾರ 3,712 ಭಾರತೀಯರು ಸೌದಿಯಲ್ಲಿ ಹಲವಾರು ತಿಂಗಳುಗಳಿಂದ ವೇತನ ಪಡೆದುಕೊಂಡಿಲ್ಲ, 2450 ಕಾರ್ಮಿಕರು ಜುಲೈ 7 ರಿಂದ ಕಂಪೆನಿಯಿಂದ ಊಟವೂ ಸಿಗದೆ ಇದ್ದಾರೆ  ಎನ್ನಲಾಗಿದೆ.

 

Leave a Reply