ನ್ಯೂಯಾರ್ಕ್: 1955, 1956 ಹಾಗೂ 57 ರಲ್ಲಿ ಲೀ ಮನ್ಸ್ ಅವರ ಜಯಕ್ಕೆ ಕಾರಣವಾಗಿದ್ದ 1955 ರ ಜಾಗ್ವಾರ್ ಡಿ ಮಾದರಿಯ ಕಾರು 21.78 ಮಿಲಿಯನ್ ಡಾಲರ್ಗೆ ಮಾರಾಟವಾಗಿದೆ.
ಇದರ ಚಕ್ರಗಳು, ಇಂಜಿನ್ ಹಾಗೂ ಚಾಲಕನ ಹಿಂಭಾಗದಲ್ಲಿ ತಲೆಗೆ ಆಸರೆ ನೀಡುವಂತ ಬೃಹತ್ ರೆಕ್ಕೆ ಮಾದರಿಯ ವಿನ್ಯಾಸ ಅತ್ಯಂತ ಬೆರಗುಗೊಳಿಸುವಂತೆ ವಿಶೇಷ ರೀತಿಯಲ್ಲಿದೆ.
ಜಾಗ್ವಾರ್ ಎಕ್ಸ್ಕೆಡಿ 501 ಮಾದರಿಯ ಈ ಕಾರು 1956 ಆಸ್ಟನ್ ಮಾರ್ಟಿನ್ ತಂಡದ ವಿರುದ್ಧ ಲೀ ಮನ್ಸ್ ಅವರ ಜಯಕ್ಕೆ ಕಾರಣವಾಗಿತ್ತು. ಜಾಗ್ವಾರ್ ಡಿ-ಟೈಪ್ ಕಾರು ಮಲ್ಸನ್ ಸ್ಟ್ರೇಯ್ಟ್ ಮಾರ್ಗದ 2,507.19 ಮೈಲು ದೂರವನ್ನು 104.47 ಸರಾಸರಿ ವೇಗ ಹಾಗೂ ಅತ್ಯಧಿಕ 156.868 ವೇಗದಲ್ಲಿ 24 ಗಂಟೆಗಳಲ್ಲಿ ಫೂರ್ಣಗೊಳಿಸಿತ್ತು.
ಈ ರೇಸ್ನಲ್ಲಿ ಮೊದಲ ಸ್ಥಾನದಲ್ಲಿ ಗೆದ್ದುದಕ್ಕಾಗಿ ಕಾರು ಅತ್ಯಧಿಕ ಬೆಲೆಬಾಳುವಂತಾಗಿದೆ. ಇದು ಆರ್ಎಂ ಸೊಥ್ಬಿ ಹರಾಜಿನಲ್ಲಿ 21.78 ಮಿಲಿಯನ್ ಡಾಲರ್ಗೆ ಮಾರಾಟವಾಗಿದ್ದು, ಬ್ರಿಟಿಷ್ ಅಟೋಮೊಬೈಲ್ನ ಅತ್ಯಂತ ದುಬಾರಿ ಹರಾಜು ಮಾರಾಟವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.