ಮುಂಬಯಿ: ಭಾರತೀಯ ರೈಲ್ವೆಯು ಮುಂಬಯಿ ಮಹಾನಗರದ 8 ಉಪನಗರ ರೈಲು ನಿಲ್ದಾಣಗಳಿಗೆ ಪ್ರಯಾಣಿಕ ಸೌಕರ್ಯಗಳೊಂದಿಗೆ ಉಚಿತ ವೈ-ಫೈ ಸೇವೆಯನ್ನು ಆರಂಭಿಸಿದೆ.
ಪ್ರಮುಖ 8 ನಿಲ್ದಾಣಗಳಿಗೆ ಬ್ರಾಡ್ಬ್ಯಾಂಡ್ ಅಂತರ್ಜಾಲ ಸೇವೆಯನ್ನು ಉದ್ಘಾಟಿಸಿದ ರೈಲ್ವೆ ಸಚಿವ ಸುರೇಶ್ ಪ್ರಭು, ಪ್ರಯಾಣಿಕರು ರೈಲ್ವೆ ಮಾಹಿತಿ ಪಡೆಯಲು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಸಚಿವಾಲಯ ಎಲ್ಲ ಪ್ರಯತ್ನಗಳನ್ನು ಮಾಡಲಿದೆ ಎಂದು ಹೇಳಿದ್ದಾರೆ.
ವೈ-ಫೈ ಚಾಲಿತ 8 ನಿಲ್ದಾಣಗಳಲ್ಲಿ 5 ನಿಲ್ದಾಣಗಳಾದ ಚರ್ಚ್ಗೇಟ್, ಬಾಂದ್ರಾ, ಬಾಂದ್ರಾ ಟರ್ಮಿನಸ್, ದಾದರ್ (WR) ಮತ್ತು ಖಾರ್ ರೋಡ್ ಪಶ್ಚಿಮ ರೈಲ್ವೆಗೆ ಸಂಬಂಧಿಸಿದೆ, ಇತರ ಮುರು ನಿಲ್ದಾಣಗಳಾದ ಕಲ್ಯಾಣ್, ಲೋಕಮಾನ್ಯ ತಿಲಕ್ ಟರ್ಮಿನಸ್, ದಾದರ್ (CR) ಕೇಂದ್ರ ರೈಲ್ವೆಗೆ ಸೇರಿವೆ.
ವೈ-ಫೈ ಸೇವೆಯನ್ನು ‘RailWire’ ಅಡಿಯಲ್ಲಿ ಒದಗಿಸಲಾಗುತ್ತಿದೆ. ಮುಂಬಯಿಯ 17 ಉಪನಗರ ನಿಲ್ದಾಣಗಳನ್ನು ವೈ-ಫೈ ಅಳವಡಿಕೆಗೆ ಆಯ್ಕೆ ಮಾಡಲಾಗಿದ್ದು, ವೈ-ಫೈ ಸೇವೆಯನ್ನು ‘ RailTel’ ಅಡಿಯಲ್ಲಿ ಒದಗಿಸಲಾಗುತ್ತಿದೆ.
ಜೊತೆಗೆ ಅಂಧೇರಿ ಹಾಗೂ ಗೋರೆಗಾಂವ್ ನಿಲ್ದಾಣಗಳಲ್ಲಿ 2 ರೈಲು ಪ್ಲಾಟ್ಫಾರ್ಮ್ಗಳನ್ನು, ವಾಸಾಯಿ ಹಾಗೂ ನಲ್ಲಸೋಪರ, ಚೆಂಬೂರ್, ಕಾಸೈವಾಡ (ಕುರ್ಲಾ), ಕಜ್ರತ್, ಕಿಂಗ್ ಸರ್ಕಲ್, ಶಹದ್ ನಿಲ್ದಾಣಗಳಲ್ಲಿ ಎಸ್ಕಲೇಟರ್ ಸಹಿತ ಪಾದಚಾರಿ ಸೇತುವೆಯನ್ನು ಉದ್ಘಾಟಿಸಿದರು.
ಛತ್ರಪತಿ ಶಿವಾಜಿ ಟರ್ಮಿನಸ್ನಲ್ಲಿ ಮಹಿಳೆಯರಿಗೆ 20 ಹಾಗೂ ಪುರುಷರಿಗೆ 54 ಮಂಚಗಳಿರುವ ಎಸಿ ರೆಸ್ಟ್ ರೂಂಗಳನ್ನು ಉದ್ಘಾಟಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.