ನವದೆಹಲಿ: ಬಾಹ್ಯಾಕಾಶ ಸಂಸ್ಥೆ ಇಸ್ರೋ ಮುಂದಿನ 3 ತಿಂಗಳುಗಳಲ್ಲಿ 4 ಪ್ರಮುಖ ಉಪಗ್ರಹಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ದೇಶಕ ಮೈಲಸ್ವಾಮಿ ಅಣ್ಣಾದುರೈ ಹೇಳಿದ್ದಾರೆ.
ಭಾರತ ಆಗಸ್ಟ್ 2015 ರಿಂದ ಆಗಸ್ಟ್ 2016ರ ವರೆಗೆ 10 ಉಪಗ್ರಹಗಳನ್ನು ಬಿಡುಗಡೆ ಮಾಡಿದೆ. ಮುಂಬರುವ ಸೆಪ್ಟೆಂಬರ್ನಲ್ಲಿ INSAT-3DR ಮತ್ತು SCATSAT-1, ಅಕ್ಟೋಬರ್ನಲ್ಲಿ GSAT-18 ಹಾಗೂ ನವೆಂಬರ್ನಲ್ಲಿ ResourceSat-2A ಬಿಡುಗಡೆ ಮಾಡಲಿದೆ. ಬಾಹ್ಯಾಕಾಶ ಸಂಸ್ಥೆಯ ಒಂದು ವಿಭಾಗ ಮಂದಿನ ಮೂರು ವರ್ಷಗಳಲ್ಲಿ 70 ಉಪಗ್ರಹಗಳನ್ನು ಬಿಡುಗಡೆ ಮಾಡುವ ಗುರಿ ಹೊಂದಿದೆ ಎಂದು ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದೆ.
ಚಂದ್ರಯಾನ್-II ಚಂದ್ರನ ಮೇಲೆನ ಮೃದು ಪ್ರದೇಶದಲ್ಲಿ ರಾಸಾಯನಿಕ ವಿಶ್ಲೇಷಣೆ ನಡೆಸುವ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದೆ.
ಇಸ್ರೋ ಸೂರ್ಯನ ಅಧ್ಯಯನಕ್ಕಾಗಿ 2020ರ ವೇಳೆಗೆ ಭಾರತದ ಮೊದಲ ಉಪಗ್ರಹ ಆದಿತ್ಯ-ಎಲ್1 ಬಿಡುಗಡೆ ಮಾಡಲಿದೆ ಎಂದು ಅಣ್ಣಾದುರೈ ಹೇಳಿರುವುದಾಗಿ ಅದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.