ನವದೆಹಲಿ : ಆರ್ಬಿಐ ನೂತನ ಗವರ್ನರ್ ಆಗಿ ಆಯ್ಕೆಯಾಗಿರುವ ಊರ್ಜಿತ್ ಪಟೇಲ್ ಅವರ ಮುಂದೆ ಹಲವಾರು ಸವಾಲುಗಳು ಎದುರಾಗಿವೆ.
ಆರ್ಥಿಕತೆಯನ್ನು ಉತ್ತೇಜಿಸಲು ಸಾಲಗಳ ದರವನ್ನು ಕಡಿತಗೊಳಿಸುವ ಬಗೆ ಹೇಗೆ ಎಂಬ ಸವಾಲು ಅವರನ್ನು ಕಾಡಲಿದೆ.
ರಘುರಾಮ್ ರಾಜನ್ ಅವರ ಅಡಿಯಲ್ಲಿ ಆರ್ಬಿಐ ಸಾಲಗಳ ದರವನ್ನು ಮೊದಲ ವರ್ಷದಲ್ಲಿ 150 ಬೇಸಿಸ್ ಪಾಯಿಂಟ್ನಲ್ಲಿ ಕಡಿತಗೊಳಿಸಿತ್ತು. ಆದರೆ ಬ್ಯಾಂಕ್ಗಳು ಇದರ ಅರ್ಧದಷ್ಟನ್ನು ಮಾತ್ರ ತಮ್ಮ ಗ್ರಾಹಕರಿಗೆ ಕಡಿತಗೊಳಿಸಿದ್ದವು.
ಜುಲೈನಲ್ಲಿ ಹಣದುಬ್ಬರದ ಪ್ರಮಾಣ ಶೇ. 6 ರಷ್ಟಿತ್ತು. ಇದನ್ನು ಆರ್ಬಿಐ ಮಾರ್ಚ್ 2017 ಕ್ಕೆ ಶೇ. 5 ಕ್ಕೆ ಇಳಿಸುವ ಗುರಿಯನ್ನು ಹೊಂದಿದೆ.
ಬಡ್ಡಿದರ ಕಡಿತಗೊಳಿಸುವಂತೆ ಊರ್ಜಿತ್ ಪಟೇಲ್ ಅವರ ಮೇಲೆ ಒತ್ತಡ ಹೇರುವುದಾಗಿ ಬ್ಯಾಂಕ್ಗಳು ನಿರ್ಧರಿಸಿಕೊಂಡಿವೆ.
ಬ್ಯಾಂಕ್ಗಳು ಲಾಭದಾಯಕವಾಗಿಯೇ ಉಳಿಯುವ ಅಗತ್ಯವಿದೆ. ಹೀಗಾಗಿ ತಮ್ಮ ತಳಪಾಯವನ್ನು ರಕ್ಷಿಸಲು ಅವುಗಳು ಪ್ರಯತ್ನವನ್ನು ಮುಂದುವರೆಸಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರು ಹೇಳಿದ್ದಾರೆ.
ಶನಿವಾರ ಕೇಂದ್ರ ಸರ್ಕಾರ ಊರ್ಜಿತ್ ಪಟೇಲ್ ಅವರನ್ನು ರಘುರಾಮ್ ರಾಜನ್ ಅವರ ಉತ್ತರಾಧಿಕಾರಿಯಾಗಿ ನೇಮಿಸಿದೆ.