×
Home About Us Advertise With s Contact Us

ಹಿಂದು ರುದ್ರಭೂಮಿ ಸ್ವಚ್ಛತಾ ಕಾರ್ಯಕ್ರಮ

ಬೈಂದೂರು : ಸ್ಫೂರ್ತಿ ಮಹಿಳಾ ಸಂಘ ದೊಡ್ಡಹಿತ್ಲು ಗಂಗೊಳ್ಳಿ ಮತ್ತು ಸಾಂಬಾಜಿ ಅಭಿಮಾನಿ ಬಳಗ ಗಂಗೊಳ್ಳಿ ಇವರ ನೇತೃತ್ವದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತ್ಯಾಗ ಮಾಡಿದ ಭಗತ್‌ಸಿಂಗ್, ರಾಜ್‌ಗುರು ಹಾಗೂ ಸುಖ್‌ದೇವ ತಾವರ್ ಇವರ ಹುತಾತ್ಮರಾದ ದಿನದ ನೆನಪಿಗಾಗಿ ಗಂಗೊಳ್ಳಿಯ ಹಿಂದು ರುದ್ರಭೂಮಿ ಸ್ವಚ್ಛತೆ ಮಾಡಲಾಯಿತು.

BYN-Mar25-5--Naga-Kharvi-&-Rudrabhoomi

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪರಮೇಶ್ವರ ಮೋಹನ ಖಾರ್ವಿ, ರುದ್ರಭೂಮಿ ಶಿವನ ಸನ್ನಿಧಾನ. ಇದರ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಜೈ ಪರಶುರಾಮ್ ಬಳಗ ಗಂಗೊಳ್ಳಿ, ಕ್ರಾಂತಿ ವೀರರ ಅಭಿಮಾನಿ ಬಳಗ, ಚಂದ್ರಶೇಖರ್ ಅಜಾದ್ ಅಭಿಮಾನಿ ಬಳಗ, ನಮೋ ಆದಿ ಬಳಗ, ವೀರ ಸಾವರ್ಕರ್ ದೇಶಪ್ರೇಮಿ ಬಳಗದ ಸದಸ್ಯರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top